ಚೆನ್ನಮ್ಮ ವೃತ್ತದಲ್ಲೇ- ನ್ಯೂ ಇಯರ್ ಮೊದಲ ಹಿಟ್ ಆ್ಯಂಡ್ ರನ್ ಕೇಸ್
1 min read
ಹುಬ್ಬಳ್ಳಿ: ಹೊಸ ವರ್ಷದ ಸಂಭ್ರಮಾಚರಣೆಯಲ್ಲಿರುವ ಜನರಿಗೆ ಕಟ್ಟುನಿಟ್ಟಿನ ಕ್ರಮದ ಬಗ್ಗೆ ಸರಕಾರ ತಿಳುವಳಿಕೆ ನೀಡಿದೆ. ಆದರೂ, ಆಟೋ ಚಾಲಕನೋರ್ವ ಆಟಾಟೋಪ ಮೆರೆದಿದ್ದು, ಬೈಕಿನಲ್ಲಿ ಹೋಗುತ್ತಿದ್ದ ಸವಾರನಿಗೆ ಡಿಕ್ಕಿ ಹೊಡೆದು ಪರಾರಿಯಾದ ಘಟನೆ ಹುಬ್ಬಳ್ಳಿಯ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ನಡೆದಿದೆ.
ಹಳೇ ಬಸ್ ನಿಲ್ದಾಣದಿಂದ ಯಲ್ಲಾಪುರ ಓಣಿಗೆ ಸಹೋದರಿಯ ಮನೆಗೆ ಹೋಗುತ್ತಿದ್ದ ಸಮೀರ ಎಂಬ ಯುವಕನ ಬೈಕಿಗೆ ಆಟೋ ಡಿಕ್ಕಿ ಹೊಡೆದು ಪರಾರಿಯಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ರಸ್ತೆಯಲ್ಲಿ ಬಿದ್ದು ಗಾಯಗೊಂಡಿದ್ದು, ಸ್ಥಳೀಯರು ಮೇಲೆತ್ತಿ ಬೇರೆ ಕಡೆ ಕೂಡಿಸಿದರು.
ಆಟೋ ಸಡನ್ನಾಗಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಮೀರನ ಕಾಲಿಗೆ ಏಟು ಬಿದ್ದಿದ್ದು, ಡಿಕ್ಕಿ ಹೊಡೆದು ಪರಾರಿಯಾಗಿರುವ ಆಟೋ ನಂಬರನ್ನ ಪೊಲೀಸರಿಗೆ ನೀಡಲಾಗಿದೆ.
ಹೊಸ ವರ್ಷದ ಹೊಸ್ತಿಲಿನಲ್ಲೇ ಇಂತಹದೊಂದು ಘಟನೆ ಸಮೀರನಿಗೆ ನೋವನ್ನುಂಟು ಮಾಡಿದ್ದು, ಯಾವುದೇ ಗಲಾಟೆಗಳು ಆಗಬಾರದೆಂದು ಪೊಲೀಸ್ ಕಾವಲು ಹಾಕಿದ್ದರೂ, ನೂತನ ವರ್ಷದ ಮೊದಲ ಹಿಟ್ ಆ್ಯಂಡ್ ರನ್ ಕೇಸ್ ದಾಖಲಾಗಿದೆ.