ಧಾರವಾಡ ಕೆಎಂಎಫ್ ಬಳಿ ಅಪಘಾತ- ಕಾರು ನಜ್ಜುಗುಜ್ಜು
1 min read
ಧಾರವಾಡ: ಕಾರಿಗೆ ಟಿಪ್ಪರವೊಂದು ಡಿಕ್ಕಿ ಹೊಡೆದು, ನಿಯಂತ್ರಣ ತಪ್ಪಿದ ಕಾರು ಬ್ಯಾರಿಕೇಡಗೆ ಡಿಕ್ಕಿಯಾದ ಘಟನೆ ಧಾರವಾಡ ತಾಲೂಕಿನ ರಾಯಾಪುರ ಸಮೀಪದ ಕೆಎಂಎಫ್ ಬಳಿ ಸಂಭವಿಸಿದೆ.
ಧಾರವಾಡ ಕಡೆಯಿಂದ ಹುಬ್ಬಳ್ಳಿಯತ್ತ ಹೊರಟಿದ್ದ ಲಾರಿಯು ಮುಂದೆ ಹೋಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದ ನಿಯಂತ್ರಣ ಕಳೆದುಕೊಂಡ ಕಾರು ಚಾಲಕ ಬಿಆರ್ ಟಿಎಸ್ ಬ್ಯಾರಿಕೇಡಗೆ ಡಿಕ್ಕಿ ಹೊಡೆದಿದೆ. ಇದರಿಂದ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ವಿಟಿಪಿಎಸ್ ನೌಕರ ಮಲ್ಲಿಕಾರ್ಜುನ ಪ್ರಾಣಾಪಾಯದಿಂದ ಪಾರಾಗಿದ್ದು, ಕಾಲಿಗೆ ಪೆಟ್ಟಾಗಿದೆ. ಗಾಯಾಳುವನ್ನ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ರಾಮಪ್ಪ ಗಾಣಗೇರ ಎಂಬುವವರಿಗೆ ಸೇರಿದ ಟಿಪ್ಪರನಿಂದ ಅವಘಡ ಸಂಭವಿಸಿದೆ. ಧಾರವಾಡ ಶಿವಗಿರಿ ನಿವಾಸಿಯಾಗಿರುವ ಮಲ್ಲಿಕಾರ್ಜುನ ಅವರು ರಾಯಾಪುರ ಬಳಿಯಿರುವ ಕಚೇರಿಗೆ ಹೋಗುತ್ತಿದ್ದಾಗ ಘಟನೆ ಸಂಭವಿಸಿದೆ.
ಧಾರವಾಡ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎರಡು ವಾಹನಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.