ಕುಂದಗೋಳ ಕ್ರಾಸ್ ಬಳಿ ಅಪಘಾತ- ಇಬ್ಬರ ಸ್ಥಿತಿ ಗಂಭೀರ
1 min read
ಹುಬ್ಬಳ್ಳಿ: ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಅಂಟಿಕೊಂಡೇ ಇರುವ ಕುಂದಗೋಳ ಕ್ರಾಸ್ ಬಳಿ ಬೈಕಿಗೆ ಟ್ಯಾಂಕರ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ಸಂಭವಿಸಿದೆ.
ಹುಬ್ಬಳ್ಳಿಯಿಂದ ಲಕ್ಷ್ಮೇಶ್ವರಕ್ಕೆ ಹೊರಟಿದ್ದ ಬೈಕ್ ಸವಾರರಿಗೆ ಕ್ಯಾಂಟರ್ ಡಿಕ್ಕಿ ಹೊಡೆದಿದ್ದರಿಂದ ಅಶೋಕ ಗುರುಪದಪ್ಪ ಲಕ್ಕಿಮರದ ಹಾಗೂ ಅರುಣ ಬಸವರಾಜ ಜಾಡಿ ತೀವ್ರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನ ಕಿಮ್ಸಗೆ ರವಾನೆ ಮಾಡಲಾಗಿದೆ.
ಕ್ಯಾಂಟರ್ ವಾಹನದ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಡಿಕ್ಕಿ ಹೊಡೆದು ವಾಹನ ಪರಾರಿಯಾಗಿದ್ದು, ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಿಮ್ಸನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳಿಂದ ಮಾಹಿತಿ ಪಡೆಯುತ್ತಿದ್ದು, ಪರಾರಿಯಾಗಿರುವ ಕ್ಯಾಂಟರ್ ವಾಹನವನ್ನ ಪತ್ತೆ ಮಾಡಲು ಕಾರ್ಯಾಚರಣೆ ನಡೆಸಿದ್ದಾರೆ.
ಕ್ಯಾಂಟರ್ ವಾಹನ ಹುಬ್ಬಳ್ಳಿಯತ್ತ ತೆರಳಿದೆ ಎಂದು ಹೇಳಲಾಗಿದ್ದು, ಡಾಬಾದ ಬಳಿಯಿರುವ ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದೆ.