ಆಲಮಟ್ಟಿ ಬಳಿ ಖಾಸಗಿ ಬಸ್ ಗಳ ಡಿಕ್ಕಿ: ವಾಹನದಲ್ಲಿದ್ದ 84 ಜನರೇನಾಗಿದ್ದಾರೆ ಗೊತ್ತಾ..! ಚಾಲಕನ ಹೊರಗೆ ತೆಗೆಯಲು ಶತಪ್ರಯತ್ನ- ವೀಡಿಯೋ ಸಮೇತ ಸುದ್ದಿ

ವಿಜಯಪುರ: ಖಾಸಗಿ ಬಸ್ ಚಾಲಕರು ಒಬ್ಬರನ್ನು ಒಬ್ಬರು ಓವರ್ ಟೇಕ್ ಮಾಡಲು ಹೋಗಿ ಖಾಸಗಿ ಬಸ್ ಗೆ ಮತ್ತೊಂದು ಖಾಸಗಿ ಬಸ್ ಹಿಂಬದಿಯಿಂದ ಡಿಕ್ಕಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಆಲಮಟ್ಟಿ ಬಳಿ ನಡೆದಿದೆ.
ವಿಜಯಪುರದಿಂದ ಬೆಂಗಳೂರು ಹೊರಟಿದ್ದ ಎರಡು ಖಾಸಗಿ ಬಸ್ ಗಳು ಅಪಘಾತವಾಗಿದ್ದು, ಚಾಲಕ ಸಂತೋಷ ಎಂಬಾತ ಸ್ಟೇರಿಂಗ್ ನಲ್ಲಿ ಸಿಲುಕಿಕೊಂಡಿದ್ದು, ಸ್ಥಳೀಯರ ಸಹಾಯದಿಂದ ಚಾಲಕನ್ನು ಬಜಾವ ಮಾಡಲಾಗಿದೆ.
ಇನ್ನು ಎರಡು ಖಾಸಗಿ ಬಸ್ ಚಾಲಕರು ಓವರ್ ಟೇಕ್ ಮಾಡಲು ಹೋಗಿ ಯಡವಟ್ಟು ಮಾಡಿಕೊಂಡಿದ್ದು, ಎರಡು ಬಸ್‌ಗಳ ಗಾಜು ಸಂಪೂರ್ಣ ಪುಡಿಪುಡಿ ಆಗಿವೆ. ಅಲ್ಲದೇ, ಪ್ರಯಾಣಿಕರಿಗೆ ಯಾವುದೇ ಪ್ರಾಣಾಪಾಯವಿಲ್ಲದೇ ಸೇಪ್ ಆಗಿದ್ದಾರೆ.