Posts Slider

Karnataka Voice

Latest Kannada News

“ಸರ್ಕಲ್” ದಲ್ಲಾಳಿ ಎಸಿಬಿ ಬಲೆಗೆ: 500 ನೋಟಿನೊಂದಿಗೆ ಸಿಕ್ಕುಬಿದ್ದ ಟೊಪ್ಪಿಗೆ ಹಾಕಿದಾತ..!

1 min read
Spread the love

ಧಾರವಾಡ: ಜಿಲ್ಲೆಯ ಕುಂದಗೋಳ ತಾಲೂಕಿನ ಬೆಟದೂರು ಗ್ರಾಮದ ಮಹಿಳೆಗೆ ಮನಸ್ವಿನಿ ಯೋಜನೆಯ ಮಾಸಾಶನ ಪಡೆಯಲು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದ ಹಾಗೆ ಕಂದಾಯ ನಿರೀಕ್ಷಕರ ಬಳಿ ಸಹಾಯಕನಾಗಿರುವ (ಸರಕಾರಿ ನೌಕರನಲ್ಲ) ವ್ಯಕ್ತಿಯನ್ನಲಂಚದಣದ ಸಮೇತ ಹಿಡಿಯುವಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ತಮ್ಮ ಚಿಕ್ಕಮ್ಮ ಮಾದೇವಿ ಹಂಚಿನಾಳರಿಗೆ ಮಾಸಾಶನ ಪಡೆಯಲು ಕಂದಾಯ ನಿರೀಕ್ಷಕರು ಹಣ ಕೇಳುತ್ತಿದ್ದಾರೆಂದು ಬೆಟದೂರ ಗ್ರಾಮದ ಯಲ್ಲಪ್ಪ ಶಿವಳ್ಳಿ ಎಸಿಬಿಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ದಾಳಿ ಮಾಡಿದ ಪೊಲೀಸರು, ಕಂದಾಯ ನಿರೀಕ್ಷಕರ ಬಳಿ ಸಹಾಯಕನಾಗಿ ಕಾರ್ಯನಿರ್ವಹಿಸುವ ಶಿವಾನಂದ ಶಿರಹಟ್ಟಿಯನ್ನ ಬಂಧನ ಮಾಡಿದ್ದಾರೆ.

ಕಂದಾಯ ನಿರೀಕ್ಷಕ ಸದಾನಂದ ದೇಮಣ್ಣನವರ, ಶಿವಾನಂದನನ್ನ ಭೇಟಿಯಾಗಲು ತಿಳಿಸಿದ್ದರು. ಕೆಲಸ ಮಾಡಿಕೊಡಲು ಮೊದಲು 700ರೂಪಾಯಿ ಕೇಳಿ, 600ಕ್ಕೆ ಒಪ್ಪಿಕೊಂಡಿದ್ದರು. ಇಂದು ಆ ಸಂಬಂಧ 500 ರೂಪಾಯಿ ಕೊಡುವಾಗ, ಎಸಿಬಿ ದಾಳಿ ಮಾಡಿದೆ.

ಟ್ರ್ಯಾಪ್ ತಂಡದ ನೇತೃತ್ವವನ್ನ ಇನ್ಸಪೆಕ್ಟರುಗಳಾದ ಬಿ.ಎ.ಜಾಧವ, ಮಂಜುನಾಥ ಹಿರೇಮಠ ವಹಿಸಿಕೊಂಡಿದ್ದರು. ಸಿಬ್ಬಂದಿಗಳಾದ ಗಿರೀಶ ಮನಸೂರ, ಶ್ರೀಶೈಲ ಕಾಜಗಾರ, ಎಸ್.ಐ.ಬೀಳಗಿ, ಶಿವಾನಂದ ಕೆಲವೆಡಿ, ಲೋಕೇಶ ಬೆಂಡಿಕಾಯಿ, ಕಾರ್ತಿಕ ಹುಯಿಲಗೋಳ, ಆರ್.ಬಿ.ಯರಗಟ್ಟಿ, ಗಣೇಶ ಶಿರಹಟ್ಟಿ ಕಾರ್ಯಾಚರಣೆ ವೇಳೆ ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *