ಪಿಎಸ್ಐ, ಹವಾಲ್ದಾರ ಬಂಧನ, ಕಾಲು ಮುರಿದುಕೊಂಡ ಪೇದೆ: ಲಂಚಗುಳಿತನ ಬಯಲು
1 min read
ಬೆಂಗಳೂರು: ಕಳ್ಳತನದ ಪ್ರಕರಣದಲ್ಲಿ ಆರೋಪಿಯ ಹೆಸರನ್ನ ಕೈಬಿಡಲು ಲಂಚ ಪಡೆಯಲು ಮುಂದಾಗಿದ್ದ ಮಹಿಳಾ ಪಿಎಸ್ಐ ಹಾಗೂ ಪೇದೆಯ ಮೇಲೆ ಎಸಿಬಿ ದಾಳಿ ನಡೆದಿದ್ದು, ಪೇದೆಯೋರ್ವ ತಪ್ಪಿಸಿಕೊಳ್ಳಲು ಹೋಗಿ ಗಾಯಗೊಂಡ ಘಟನೆ ಬೆಂಗಳೂರಿನ ಬೈಯಪ್ಪನಹಳ್ಳಿಯಲ್ಲಿ ನಡೆದಿದೆ.
ಕಳ್ಳತನ ಪ್ರಕರಣದ ಮೊಬೈಲ್ ಖರೀದಿ ಮಾಡಿದ್ದವರ ಹೆಸರನ್ನ ಪ್ರಕರಣದಿಂದ ಕೈಬಿಡಲು ಎರಡು ಲಕ್ಷದ ಲಂಚ ಕೇಳಲಾಗಿತ್ತು. ಆದರೆ, ಡೀಲ್ ಕೊನೆಗೆ ಒಂದು ಲಕ್ಷಕ್ಕೆ ಮುಗಿದಿತ್ತು. ಅದೇ ಹಣವನ್ನ ಇಂದು ಕೊಡಲು ಬಂದಾಗ, ಎಸಿಬಿ ದಾಳಿ ನಡೆದಿದೆ.
ಭೈಯಪ್ಪನಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಸೌಮ್ಯ ಹಾಗೂ ಹವಾಲ್ದಾರ ಜೆ.ಪಿ.ರೆಡ್ಡಿ ದಾಳಿಯಲ್ಲಿ ಸಿಕ್ಕಿ ಬಿದ್ದಿದ್ದು, ಹಣವನ್ನ ಪಡೆದಿದ್ದ ಹವಾಲ್ದಾರ, ಆ ಹಣವನ್ನ ಪೇದೆ ಬಳಿ ಕೊಟ್ಟಿದ್ದ. ಎಸಿಬಿ ದಾಳಿ ಎಂದು ಗೊತ್ತಾದ ತಕ್ಷಣವೇ ಹಣದ ಸಮೇತ ಪರಾರಿಯಾಗಲು ಯತ್ನಿಸಿದ ಕುಮಾರ ಎಂಬ ಪೇದೆ ಬಿದ್ದು ಗಾಯ ಮಾಡಿಕೊಂಡಿದ್ದಾರೆ.
ಎಸಿಬಿ ಬಲೆಗೆ ಬಿದ್ದಿರುವ ಪಿಎಸ್ಐ ಹಾಗೂ ಹವಾಲ್ದಾರರ ವಿಚಾರಣೆ ನಡೆಸುತ್ತಿರುವ ಎಸಿಬಿ ಅಧಿಕಾರಿಗಳು, ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.