ಕುಂದಗೋಳದಲ್ಲಿ ಎಸಿಬಿ ರೇಡ್: ಸಿಕ್ಕಿದ್ಯಾರು.. ಕಕ್ಕೋದೆಷ್ಟು..!
1 min read
ಧಾರವಾಡ: ಜಮೀನಿನಲ್ಲಿ ಎಷ್ಟು ಮರಗಳಿವೆ ಎಂದು ಮಾಹಿತಿಯನ್ನ ನೀಡಲು ಹಣದಾಸೆ ಮಾಡಿ ಹತ್ತು ಸಾವಿರ ಪಡೆದು ಮತ್ತಷ್ಟು ಹಣಕ್ಕೆ ಬೇಡಿಕೆಯಿಟ್ಟಿದ್ದ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಹುಬ್ಬಳ್ಳಿಯ ಮುತ್ತುಗೌಡ ಗಂಗನಗೌಡರ ಜಮೀನು ಕುಂದಗೋಳದ ಬೆಳ್ಳಿಗಟ್ಟಿ ಬಳಿ ಹೆದ್ದಾರಿಗೆ ಹೋಗಿತ್ತು. ಜಮೀನು ಸ್ವಾಧೀನಪಡಿಸಿಕೊಂಡ ನಂತರ ಅದರಲ್ಲಿ ಎಷ್ಟು ಮರಗಳಿದ್ದವು ಎಂಬ ಮಾಹಿತಿಯನ್ನ ತೋಟಗಾರಿಕೆ ಇಲಾಖೆ ನೀಡದರೇ, ಹೈವೇದವರು ಹಣವನ್ನ ಕೊಡುತ್ತಿದ್ದರು. ಅದೇ ಕಾರಣಕ್ಕೆ ಸಹಾಯಕ ನಿರ್ದೇಶಕ ಪರಶುರಾಮ ಹಲಕುರ್ಕಿ ಲಂಚದ ಹಣ ಕೇಳಿದ್ದ.
ಮುತ್ತುಗೌಡನೊಂದಿಗೆ 50 ಸಾವಿರಕ್ಕೆ ಡಿಮ್ಯಾಂಡ್ ಮಾಡಿದ್ದ ಅಧಿಕಾರಿಗೆ ಮೊದಲು 10 ಸಾವಿರ ರೂಪಾಯಿ ಕೊಡಲಾಗಿತ್ತು. ಉಳಿದ 40 ಸಾವಿರ ರೂಪಾಯಿ ಕೊಡುವಾಗ ಎಸಿಬಿ ದಾಳಿ ನಡೆದಿದ್ದು, ಅಧಿಕಾರಿ ಹಣದ ಸಮೇತ ಸಿಕ್ಕು ಬಿದ್ದಿದ್ದಾರೆ.
ಎಸಿಬಿ ಡಿಎಸ್ಪಿ ವೇಣುಗೋಪಾಲ, ಇನ್ಸಪೆಕ್ಟರುಗಳಾದ ಜಾಧವ, ಹಿರೇಮಠ ಸಿಬ್ಬಂದಿಗಳಾದ ಗಿರೀಶ ಮನಸೂರ, ಲೋಕೇಶ ಬೆಂಡಿಕಾಯಿ, ಎಸ್.ಎಸ್.ಕಾಜಗಾರ ದಾಳಿಯಲ್ಲಿ ಭಾಗವಹಿಸಿದ್ದರು.