ಹಾರ ತುರಾಯಿಯವರೇ ಪ್ರಚಾರಕ್ಕೆ ನಿಲ್ಲಬೇಡಿ- ನಿಮಗೆ ಎನ್.ಪಿ.ಎಸ್ ನೌಕರನ ಚಾಲೇಂಜ್ ಏನಿದೆ ಗೊತ್ತಾ..!
ಧಾರವಾಡ: ರಾಜ್ಯದಲ್ಲಿ ಶಿಕ್ಷಕರ ವರ್ಗಾವಣೆಯನ್ನು ನಾನು ಮಾಡಿಸಿದೆ, ನಮ್ಮ ಸಂಘಟನೆಯ ಮನವಿ ಮೇರೆಗೆ ಆಗಿದೆ ಎನ್ನುವ ಮಹಾನ್ ಶಿಕ್ಷಕ, ನೌಕರರ ಪ್ರತಿನಿಧಿಗಳೇ. ವರ್ಗಾವಣೆಯಂತಹ ಪ್ರಕ್ರಿಯೆ ಋತುಮಾನ ಸಹಜವಾದದ್ದು ಎಂಬುದು ನಿಮಗೆ ತಿಳಿದಿಲ್ಲವೇ.
ವರ್ಗಾವಣೆ ಈಗಾಗದಿದ್ದರೆ ಕೆಲವು ತಿಂಗಳುಗಳ ನಂತರವಾದರೂ ಆಗೆ ಆಗುತ್ತಿತ್ತು, ಆಗಲೇಬೇಕಿತ್ತು. ಇದನ್ನು ಈಗ ಅಂದರೆ ಕಳೆದ ವರ್ಷದ ಬೇಸಿಗೆಯ ರಜಾ ಅವಧಿಯಲ್ಲಿ ಆಗಬೇಕಾದ ವರ್ಗಾವಣೆ ಪ್ರಕ್ರಿಯೆಯನ್ನು ಈಗ ಮಾಡಿಸಿ ಏನೋ ಸಾಧಿಸಿದ್ದೆವೆ ಎಂಬಂತೆ ಬೀಗುತ್ತಿರುವಿರೇಕೆ. ಇದೇ ಇರಬಹುದು ನಿಮ್ಮ ಜೀವನದ ಮಹಾನ್ ಸಾಧನೆ ಅಲ್ಲವೇ..?
ನಿಮಗೆ ರಾಜ್ಯದ ಸಮಸ್ತ NPS ನೌಕರರ ಪರವಾಗಿ ನನ್ನದು open challenge ಇದೆ. ನಿಮಗೆ ನಿಜವಾಗಲೂ ನೌಕರರ ಪರವಾಗಿ ಕಾಳಜಿ ಇದ್ದರೆ ಈ ವರ್ಷ್ಯಾಂತದೊಳಗೆ NPS ರದ್ದು ಪಡಿಸಿ ನೋಡೋಣ. ಅವಾಗ ನಾನೇ ನಿಮ್ಮನೇಲ್ಲ ಕೇವಲ ಹಾರ ತುರಾಯಿಗಳಿಂದ ಸನ್ಮಾನ ಮಾಡುದಿಲ್ಲ. ಬದಲಾಗಿ ನಮ್ಮ ಮನೆಯ ದೇವರ ಕೋಣೆಯಲಿ ನಿಮ್ಮೇಲ್ಲರ ಭಾವಚಿತ್ರವನಿಟ್ಟು ದೇವರೆಂದು ಪೂಜಿಸುವೆ. NPS ರದ್ದು ಪಡಿಸಲು ಆಗದಿದ್ದರೆ ನಿಮ್ಮ ಬಗ್ಗೆ ನೀವೇ ಏನೆಂಬುದನ್ನು ಅರ್ಥೈಸಿಕೊಳ್ಳಿ.
ಸರಕಾರದ ಮಾಡಿದ ಆದೇಶಗಳನ್ನೇಲ್ಲ ನಾವೇ ಮಾಡಿಸಿದ್ದೇವೆ ಎಂದು ಹೇಳಿಕೊಳ್ಳುವ ನಿಮಗೆ ನಮ್ಮ ಚಾಲೆಂಜ್ ಅರ್ಥವಾಗಿದೆ ಎಂದುಕೊಳ್ಳುತ್ತೇನೆ. ಅಲ್ಲಿಯವರೆಗೆ ಕಾಯುತ್ತೇನೆ.
ಇಂತಿ ನಿಮ್ಮ NPSಶಾಪಗ್ರಸ್ತ ನೌಕರ