ಧಾರವಾಡ ಜಿಲ್ಲೆಯಲ್ಲಿ ಕೊರೋನಾ ಮಾಯ..- ಕೋವಿಡ್ ಮುಕ್ತ ಜಿಲ್ಲೆಯತ್ತ ವಿದ್ಯಾನಗರಿ

ಧಾರವಾಡ: ಜಿಲ್ಲೆಯಲ್ಲಿಯೂ ಕೊರೋನಾ ಪ್ರಕರಣಗಳು ಹೆಚ್ಚಾಗಿ ಆತಂಕ ಮೂಡಿಸಿದ್ದನ್ನ ನೆನಪಿನಲ್ಲಿಟ್ಟುಕೊಳ್ಳದ ಹಾಗೇ ಕಡಿಮೆಯಾಗುತ್ತಿದ್ದು, ಇದೇ ಥರವಾಗಿ ಮುಂದುವರೆದರೇ ಜಿಲ್ಲೆಯೂ ಕೆಲವೇ ದಿನಗಳಲ್ಲಿ ಕೊರೋನಾ ಮುಕ್ತವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಹೌದು.. ಕರ್ನಾಟಕ ಆರೋಗ್ಯ ಇಲಾಖೆ ಹೊರಡಿಸಿರುವ ಅಂಕಿ-ಸಂಖ್ಯೆಗಳನ್ನ ನೋಡಿದಾಗ ಧಾರವಾಡ ಜಿಲ್ಲೆ ಕೊರೋನಾ ಸೋಂಕಿತರಿಂದ ದೂರವಾಗುತ್ತಿದೆ. ಜಿಲ್ಲೆಯಲ್ಲಿ ಕೇವಲ 264 ಸೋಂಕಿತರು ಮಾತ್ರ ಉಳಿದಿದ್ದು, ಜನತೆ ಇನ್ನಷ್ಟು ಜಾಗೃತೆ ವಹಿಸಿದರೇ, ಕೋವಿಡ್-19 ಮಾಯವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಜಿಲ್ಲೆಯಲ್ಲಿ ಇಲ್ಲಿಯವರೆಗೆ 20968 ಪಾಟಿಸಿವ್ ಪ್ರಕರಣಗಳು ಪತ್ತೆಯಾಗಿದ್ದು, 20129 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ 575 ಜನ ಸೋಂಕಿತರು ಕೊರೋನಾದಿಂದ ಸಾವಿಗೀಡಾಗಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ಪ್ರತಿ ದಿನ ಕಡಿಮೆ ಪ್ರಕರಣಗಳು ದಾಖಲಾಗುತ್ತಿದ್ದು, ಗುಣಮುಖರಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಇದೇ ತೆರನಾಗಿ ಮುಂದುವರೆದರೇ, ಕೊರೋನಾ ಸಂಪೂರ್ಣವಾಗಿ ಜಿಲ್ಲೆಯಿಂದ ಕಳೆದ ಹೋಗುವುದರಲ್ಲಿ ಯಾವುದೇ ಸಂಶಯವಿಲ್ಲ.