ಮೂರು ಠಾಣೆ-ಮೂರು ಓಸಿ ಕೇಸ್-ಐವರ ಬಂಧನ-28920 ನಗದು ವಶ
1 min read
ಹುಬ್ಬಳ್ಳಿ: ಅವಳಿನಗರದ ಮೂರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಎರಡು ಕಡೆ ಸಿಸಿಬಿ ತಂಡ ಇನ್ನೊಂದು ಠಾಣೆಯಲ್ಲಿ ಅದೇ ಠಾಣಾಧಿಕಾರಿ ನಡೆಸಿದ ದಾಳಿಯಲ್ಲಿ ಮಟಕಾ ಆಡುತ್ತಿದ್ದ ಐದು ಜನರನ್ನ ಬಂಧನ ಮಾಡಿ, ಸಾವಿರಾರೂ ರೂಪಾಯಿಯನ್ನ ವಶಕ್ಕೆ ಪಡೆದಿದ್ದಾರೆ.
ಧಾರವಾಡ ಶಹರ ಠಾಣೆ ವ್ಯಾಪ್ತಿಯ ನಿಜಾಮುದ್ಧೀನ ಕಾಲನಿಯಲ್ಲಿ ಮಟಕಾ ಆಡುತ್ತಿದ್ದ ಈರಣ್ಣ ರಾಮಚಂದ್ರ ಹಿರೇಮಠ, ಗೋಪಾಲ ತಿಮ್ಮಪ್ಪ ಸೇರೆಗಾರ ಎಂಬುವವರನ್ನ ಬಂಧನ ಮಾಡಲಾಗಿದೆ. ಬಂಧಿತರಿಂದ 7300 ರೂಪಾಯಿ ವಶಕ್ಕೆ ಪಡೆದು ಕಾಣೂನು ಕ್ರಮ ಜರುಗಿಸಿದ್ದಾರೆ. ಇನ್ಸಪೆಕ್ಟರ್ ಎಂ.ಎಂ.ನದಾಫ ನೇತೃತ್ವದಲ್ಲಿ ದಾಳಿ ನಡೆದಿತ್ತು.
ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಆನಂದನಗರದಲ್ಲಿ ಮಟಕಾ ನಡೆಸುತ್ತಿದ್ದ ಇಬ್ಬರನ್ನ ಬಂಧನ ಮಾಡುವಲ್ಲಿ ಸಿಸಿಬಿ ಇನ್ಸಪೆಕ್ಟರ್ ಶ್ಯಾಮರಾವ ಸಜ್ಜನ ತಂಡ ಯಶಸ್ವಿಯಾಗಿದೆ. ಬಂಧಿತರನ್ನ ಮುಜಾಮೀಲ್ ಮಹ್ಮದಘಾಜೀಲ ಸುದರ್ಜಿ ಹಾಗೂ ಮಲ್ಲಿಕ ಅಬ್ದುಲಸತ್ತಾರ ಬಳಿಗಾರ ಎಂದು ಗುರುತಿಸಲಾಗಿದೆ. ಬಂಧಿತರಿಂದ 20300 ರೂಪಾಯಿ ನಗದು ಹಾಗೂ ಎರಡು ಮೊಬೈಲಗಳನ್ನ ವಶಕ್ಕೆ ಪಡೆಯಲಾಗಿದೆ.
ಅಶೋಕನಗರ ಠಾಣೆ ವ್ಯಾಪ್ತಿಯ ಶಕ್ತಿ ಕಾಲನಿಯಲ್ಲಿ ಮಟಕಾ ಆಡುತ್ತಿದ್ದ ಓರ್ವನನ್ನ ಬಂಧನ ಮಾಡುವಲ್ಲಿ ಇನಸ್ಪೆಕ್ಟರ್ ರವಿಚಂದ್ರ ಡಿ.ಬಿ. ತಂಡ ಯಶಸ್ವಿಯಾಗಿದೆ. ಬಂಧಿತನನ್ನ ಸ್ವಾಗತಕಾಲನಿಯ ಇರ್ಷಾದ ಅಮೀರಸಾಬ ಹುಬ್ಬಳ್ಳಿ ಎಂದು ಗುರುತಿಸಲಾಗಿದೆ. ಬಂಧಿತನಿಂದ 1320 ನಗದು ವಶಕ್ಕೆ ಪಡೆದು, ಮುಂದಿನ ಕಾನೂನು ಕ್ರಮವನ್ನ ಜರುಗಿಸಲಾಗಿದೆ.
ಈ ಮೂರು ಪ್ರಕರಣಗಳ ಬಗ್ಗೆ ಪೊಲೀಸ್ ಕಮೀಷನರ್ ಲಾಬುರಾಮ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.