‘100’ ಕಾಲ್ ಮಾಡಬೇಡಿ- 112 ಕ್ಕೆ ಮಾಡಿ: ತ್ವರಿತ ಪರಿಹಾರ ಸಿಗತ್ತೆ
1 min read
ಧಾರವಾಡ: ಯಾವುದೇ ಸಾರ್ವಜನಿಕರು ತ್ವರಿತ ಪರಿಹಾರಕ್ಕೆ ಅರ್ಜಂಟಾಗಿ 100ಕ್ಕೆ ಕಾಲ್ ಮಾಡಿ ಬಿಡಿ ಪೊಲೀಸರು ಬರ್ತಾರೆ ಎಂದು ನಂಬಿಕೊಂಡಿದ್ದರು. ಆದರೆ, ಅದಿನ್ನೂ ಇರಲ್ಲ. ಇನ್ನೂ ಮುಂದೆ 100ರ ಬದಲಾಗಿ 112ಕ್ಕೆ ಕಾಲ್ ಮಾಡಿದ್ರೇ ಮಾತ್ರ ನಿಮಗೆ ತ್ವರಿತ ಪರಿಹಾರ ಸಿಗತ್ತೆ.
ಧಾರವಾಡ ಜಿಲ್ಲೆಯಲ್ಲಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ವಾಹನಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಚಾಲನೆ ನೀಡಿದರು. ಜಿಲ್ಲಾ ಪೊಲೀಸ್ ವತಿಯಿಂದ 6 ವಾಹನಗಳನ್ನ ನಿಯೋಜನೆ ಮಾಡಿದ್ದು, ಅವುಗಳಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಆರಂಭಿಸಿದರು.
ಧಾರವಾಡ ಜಿಲ್ಲೆಯ ಸಾರ್ವಜನಿಕರು ಅಗ್ನಿ ಅವಘಡ, ವಿಪತ್ತು ಮತ್ತು ಮಹಿಳಾ ಸಹಾಯವೂ ಸೇರಿದಂತೆ ಇನ್ನುಳಿದ ತುರ್ತು ಪರಿಸ್ಥಿತಿಯಲ್ಲಿ 112 ಕ್ಕೆ ಕಾಲ್ ಮಾಡಿದರೇ, ತ್ವರಿತ ಪರಿಹಾರವನ್ನ ಪಡೆಯಬಹುದಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಹೇಳಿದರು.
ಈ ಬಗ್ಗೆ ಜನರು ಮಾಹಿತಿಯನ್ನ ಪಡೆದು ಇನ್ನೂ ಮುಂದೆ 100ಕ್ಕೆ ಕಾಲ್ ಮಾಡದೇ ಇರುವುದನ್ನ ಬಿಟ್ಟು, 112ಕ್ಕೆ ಕಾಲ್ ಮಾಡಿ ಪರಿಹಾರ ಕಂಡುಕೊಳ್ಳಿ.