ಹುಬ್ಬಳ್ಳಿಯಲ್ಲಿ ಟೈಕಾನ್ ಶೃಂಗಸಭೆ

ಹುಬ್ಬಳ್ಳಿಯ ಡೆನಿಸನ್ ಹೊಟೇಲ್ ನಲ್ಲಿ ಫೆಬ್ರುವರಿ 1 ಮತ್ತು 2 ರಂದು ದಿ. ಇಂಡಸ್ ಎಂಟರ್ ಪ್ರೀನರ್ಸ ವತಿಯಿಂದ ಟೈಕಾನ್ -2020 ಉಧ್ಯಮಶೀಲತಾ ಶೃಂಗಸಭೆಯನ್ನು ಆಯೋಜನೆ ಮಾಡಲಾಗಿದೆ ಎಂದು ಟೈಕಾನ್ ಅಧ್ಯಕ್ಷ ಶಶಿಧರ ಶೆಟ್ಟರ ಹೇಳಿದ್ದಾರೆ. ಈ ಕುರಿತು ಮಾಹಿತಿಯನ್ನು ಹಂಚಿಕೊಂಡಿರುವ ಶೆಟ್ಟರ್, ಟೈಕಾನ್ 2020 ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಚಿವ ಜಗದೀಶ ಶೆಟ್ಟರ, ಶಾಸಕ ಪ್ರಸಾದ ಅಬ್ಬಯ್ಯ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ದೇಶದ ಹಲವು ಭಾಗಗಳಿಂದ ಯಶಸ್ವಿ ಉದ್ಯಮಿಗಳು ಭಾಗವಹಿಸಲಿದ್ದಾರೆಂದು ಹೇಳಿದರು.