ಸಿಎಂ ಸಮ್ಮುಖದಲ್ಲೇ ಬೀದಿಗಿಳಿದ 70ಲಕ್ಷ ಜನ: 620ಕಿಲೋಮೀಟರ್ ಮಾನವ ಸರಪಳಿ

ಕೇರಳ: ದೇವರ ನಾಡು ಎಂದೇ ಖ್ಯಾತಿ ಪಡೆದಿರುವ ಪ್ರದೇಶದಲ್ಲೀಗ ಹೋರಾಟದ ಇತಿಹಾಸ ನಿರ್ಮಾಣವಾಗಿದೆ. ಬರೋಬ್ಬರಿ 620ಕಿಲೋಮೀಟರ್ ಮಾನವ ಸರಪಳಿ ನಿರ್ಮಿಸಿದ್ದು 70ಲಕ್ಷ ಜನ. ಯಾಕೆ ಅಂತೀರಾ…
ಕೇಂದ್ರ ಸರಕಾರ ದೇಶದಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ಬೀದಿಗಿಳಿದ ಜನರು, ಯಾವುದೇ ಕಾರಣಕ್ಕೂ ಕಾನೂನನ್ನ ಜಾರಿಗೆ ಮಾಡಬಾರದೆಂದು ಆಗ್ರಹಿಸಿದ್ರು.
ಸಿಎಂ ಪಿಣರಾಯ್ ವಿಜಯನ್ ಕೂಡಾ ಈ ಹೋರಾಟದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಇಷ್ಟೊಂದು ಜನ ಸೇರಿ ಪ್ರತಿಭಟನೆ ಮಾಡಿದರೂ ಎಲ್ಲಿಯೂ ಚಿಕ್ಕದೊಂದು ಅವಘಡ ಸಂಭವಿಸಿಲ್ಲ.