ಪುಲ್ವಾಮಾ ಹುತಾತ್ಮರಿಗೆ ಕರ್ನಾಟಕ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳಿಂದ ವೀರ ನಮನ

ಧಾರವಾಡ: ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರ ಆತ್ಮಕ್ಕೆ ಶಾಂತಿ ಕೋರಿ ಹುತಾತ್ಮ ದಿನವನ್ನು ಇಂದು ಕರ್ನಾಟಕ ವಿವಿಯಲ್ಲಿ ಆಚರಿಸಲಾಯಿತು. ವರ್ಷದ ಹಿಂದೆ ಇದೇ ದಿನ ಉಗ್ರರ ದಾಳಿಗೆ ತುತ್ತಾದ ನೂರಾರು ಸೈನಿಕರ ಬಲಿದಾನವನ್ನು ಸ್ಮರಿಸಿ ಹುತಾತ್ಮ ಸೈನಿಕರ ಆತ್ಮಗಳಿಗೆ ಶಾಂತಿಯನ್ನು ಇಂದು ಇಲ್ಲಿ ನೂರಾರು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಕೋರಲಾಯಿತು.
ಕರ್ನಾಟಕ ವಿಶ್ವ ವಿದ್ಯಾಲಯದ ಕುಲಪತಿಗಳು ವೀರ ಜವಾನ ಸ್ಮಾರಕಕ್ಕೆ ಪುಷ್ಪಾರ್ಪಣೆ ಮಾಡಿ ವಂದಿಸಿದರು. ರೆಜಿಸ್ಟ್ರಾರ್ ಹೊನ್ನು ಸಿದ್ದಾರ್ಥ, ಮಂಜು ಹೊಂಗಲದ, ವಿಶ್ವನಾಥ ಮಾನೆ ಹಣಕಾಸು ಇಲಾಖೆ ಅಧಿಕಾರಿಗಳು, ಉಪಸ್ಥಿತರಿದ್ದರು.
ಸಂಶೋಧನಾ ವಿದ್ಯಾರ್ಥಿಗಳ ಸಂಘದ ಮಾಜಿ ಅಧ್ಯಕ್ಷ ಮಂಜು ಹೊಂಗಲದ, ಪ್ರಸ್ತುತ ಅಧ್ಯಕ್ಷ ಅಮಿತ ಶಿಂಧೆ, ಪ್ರಧಾನ ಕಾರ್ಯದರ್ಶಿ ಮಲ್ಲೇಶ ಚನ್ನಬತ್ತಿ ಉಪಾಧ್ಯಕ್ಷ ಉಮರ ಫಾರೂಕ ಮೀರಾನಾಯಕ ದುಷ್ಯಂತ ಓಲೇಕಾರ ವಿಶ್ವನಾಥ ಮಾನೆ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಯಿತ್ತು.
ಹುತಾತ್ಮ ಯೋಧರ ಸ್ಮರಣಾರ್ಥವಾಗಿ ನಿರ್ಮಿಸಲಾಗಿರುವ ಅಮರ ಜವಾನ ಸ್ಮಾರಕವನ್ನು ಮಾಧವಿ ನಂದಿಮಠ ನೇತ್ರತ್ವದಲ್ಲಿ ಬೆಳ್ಳಂಬೆಳಗ್ಗೆ ಹೂಗಳಿಂದ ಶೃಂಗರಿಸಲಾಗಿತ್ತು. ಸ್ಮಾರಕದ ಎದುರು ನೂರಾರು ವಿದ್ಯಾರ್ಥಿಗಳು ಜಮಾವನೆಗೊಂಡಿದ್ದರು. ಇಂದು ಸಂಜೆ ಕ್ಯಾಂಡಲ್ ಮಾಚ್೯ ಕೂಡ ನಡೆಯಲಿದೆ.