‘ನೆಟ್’ ಗಾಗ್ಲಿ ಕಾಶ್ಮೀರ
ಸಂವಿಧಾನದ 370ನೇ ವಿಧಿಯನ್ವಯ ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಬಳಿಕ ಆ ರಾಜ್ಯದ ಇಂಟರ್ ನೆಟ್ ಆಧಾರಿತ ಸಾರ್ವಜನಿಕ ವ್ಯವಸ್ಥೆಗಳ ಮೇಲೆ ಕೇಂದ್ರ ಸರಕಾರ ಹೇರಿದ್ದ ನಿಷೇಧಾಜ್ಞೆಯನ್ನು ಹಿಂಪಡೆದುಕೊಳ್ಳವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಮಹತ್ವದ ಆದೇಶ ಪ್ರಕಟಿಸಿದೆ.
ಇಂಟರ್ ನೆಟ್ ಮತ್ತು ದೂರವಾಣಿ ಮಾಧ್ಯಮದ ಮೂಲಕ ಬಳಸಿಕೊಳ್ಳುವ ಅಭಿವ್ಯಕ್ತಿ ಸ್ವಾತಂತ್ರ್ಯ ,ವ್ಯಾಪಾರ-ವಾಣಿಜ್ಯದ ಹಕ್ಕುಗಳಿಗೆ ಸಂವಿಧಾನದಲ್ಲಿ ರಕ್ಷಣೆ ನೀಡಲಾಗಿದೆ ಎಂದು ನ್ಯಾಯಮೂರ್ತಿ ಎನ್.ವಿ.ರಮಣ ನೇತ್ರತ್ವದ ತ್ರಿ ಸದಸ್ಯ ಪೀಠ ಸಾರಿದೆ.