ಕೇಜ್ರಿವಾಲ್ ವಿರುದ್ಧ 28 ಅಭ್ಯರ್ಥಿಗಳ ಸ್ಪರ್ಧೆ ದೇಶದ ರಾಜಧಾನಿಯಲ್ಲಿ ಕಡಿಮೆ ಅಭ್ಯರ್ಥಿ ಹಾಕಿದೆ ಬಿಜೆಪಿ

ನವದೆಹಲಿ: ಫೆಬ್ರವರಿ 7ರಂದು ನಡೆಯುತ್ತಿರುವ ನವದೆಹಲಿಯ ವಿಧಾನಸಭೆ ಚುನಾವಣೆ ರಂಗೇರಿದೆ. ಹಾಲಿ ಸಿಎಂ ಅರವಿಂದ ಕೇಜ್ರಿವಾಲ್ ಅಖಾಡಾದ ಕ್ಷೇತ್ರದಲ್ಲಿ ಬರೋಬ್ಬರಿ 28ಜನ ಗೆಲುವಿಗಾಗಿ ಪೈಪೋಟಿ ನಡೆಸಲಿದ್ದಾರೆ. ದೆಹಲಿಯ ಇತಿಹಾಸದಲ್ಲೇ ಮೊದಲ ಬಾರಿಗೆ ಕಡಿಮೆ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಒಟ್ಟು 70 ವಿಧಾನಸಭಾ ಕ್ಷೇತ್ರಗಳ ಪೈಕಿ ದೇಶದ ಚುಕ್ಕಾಣಿ ಹಿಡಿದಿರುವ ಬಿಜೆಪಿ 67 ಕ್ಷೇತ್ರಗಳಲ್ಲಿ ಮಾತ್ರ ತನ್ನ ಅಭ್ಯರ್ಥಿಗಳನ್ನ ಕಣಕ್ಕೆ ಇಳಿಸಿದೆ. ಹಾಗೇಯೇ ಕಾಂಗ್ರೆಸ್ 66, ಬಿಸ್ಪಿ 68 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಒಟ್ಟು 593 ಪುರುಷ, 79 ಮಹಿಳಾ ಅಭ್ಯರ್ಥಿಗಳು ಚುನಾವಣೆ ಎದುರಿಸುತ್ತಿದ್ದಾರೆ.
ಕಳೆದ ಬಾರಿ 70 ಸೀಟುಗಳಲ್ಲಿ 67 ಸೀಟುಗಳನ್ನ ಪಡೆದಿದ್ದ ಆಮ್ ಆದ್ಮಿ ಪಕ್ಷ ಈಗಲೂ ಜನರ ಪೇವರೇಟ್ ಆಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಕೂಡ ರಾಷ್ಟ್ರ ರಾಜಧಾನಿಯಲ್ಲಿ ತಮ್ಮ ಬಲ ಪ್ರದರ್ಶನಕ್ಕೆ ಮುಂದಾಗಿದ್ದು, ಫೆಬ್ರವರಿ 7ರಂದು ಮತದಾನ ನಡೆಯಲಿದೆ.