ಕಿತ್ತೂರ ಚೆನ್ನಮ್ಮ ಹಜರತಬಿ: ಮಾದರಿ ಸರಕಾರಿ ಶಾಲೆ

ಧಾರವಾಡ: “ಏ ಕೆಂಪು ಮೂತಿಯ ಮುಖದವರೇ, ನಿಮಗೇಕೆ ಕೊಡಬೇಕು ಕಪ್ಪ… ಕಪ್ಪ ಕೊಡಬೇಕೇ ಕಪ್ಪ” ಈ ಡೈಲಾಗ್ ಹೇಳಿದ ತಕ್ಷಣವೇ ಅಲ್ಲಿದ್ದವರು ಜೋರಾಗಿ ಸಿಳ್ಳೆ, ಕ್ಯಾಕಿ ಹೊಡೆದು ಖುಷಿ ಅನುಭವಿಸುತ್ತಿದ್ದರು. ಇಂತಹ ದೃಶ್ಯಕ್ಕೆ ಚೆನ್ನಮ್ಮನಾಗಿದ್ದು ಹಜರತಬಿ ತಹಶೀಲ್ದಾರ ಎಂಬ ಆರನೇಯ ತರಗತಿಯ ಬಾಲಕಿ.
ಆಕೆ ಹಜರತಬಿ ಆಗಿರಲಿಲ್ಲ, ಸ್ವತಃ ಚೆನ್ನಮ್ಮಳಾಗಿದ್ದಳು. ಅವಳ ಮುಖದಲ್ಲಿನ ರೋಷ, ತನ್ನ ರಾಜ್ಯದ ಬಗ್ಗೆ ಕಾಳಜಿ ಎದ್ದು ಕಾಣುತ್ತಿತ್ತು. ಹಾಗಾಗಿಯೇ ಎಲ್ಲರೂ ಕೇಕೇ ಹಾಕುತ್ತಿದ್ದರು.
ಅಂದ ಹಾಗೇ ಇದು ನಡೆದಿದ್ದು ಧಾರವಾಡ ತಾಲೂಕಿನ ಶಿವಳ್ಳಿ ಸರಕಾರಿ ಮಾದರಿ ಶಾಲೆಯಲ್ಲಿ. ಗಣರಾಜ್ಯೋತ್ಸವದ ಅಂಗವಾಗಿ ನಡೆದ ಈ ರೂಪಕ ಎಲ್ಲರ ಮನಸೆಳೆಯಿತು. ಗ್ರಾಮದ ಅನೇಕರು ಅವಳಿಗೆ ‘ಖುಷಿ’ಯನ್ನ ಕೊಟ್ಟು ಸಂತಸಪಟ್ಟರು.
ಈ ಥರದ ಗ್ರಾಮೀಣ ಪ್ರತಿಭೆಗಳಿಗೆ ಮತ್ತಷ್ಟು ಅವಕಾಶಗಳು ಸಿಗಬೇಕಿದೆ. ಸರಕಾರಿ ಶಾಲೆಯಲ್ಲಿರುವ ವಿದ್ಯಾರ್ಥಿಗಳ ಪ್ರತಿಭೆ ಹೊರ ಹಾಕುವಲ್ಲಿ ಶ್ರಮಿಸಿದ ಗುರುವೃಂದವೂ ಅಭಿನಂದನಾರ್ಹ.