ಓಎಲ್‍ಎಕ್ಸ್ ನಲ್ಲಿ ಮೋಸ: 79 ಸಾವಿರ ಕಳೆದುಕೊಂಡ ಹುಬ್ಬಳ್ಳೀಗ

ಹುಬ್ಬಳ್ಳಿ: ಒಳ್ಳೆಯ ಸ್ಥಿತಿಯಲ್ಲಿರುವ ಹೊಂಡಾ ಆ್ಯಕ್ಟಿವ್ ಸ್ಕೂಟರ್‍ನ್ನ ಮಾರಾಟ ಮಾಡುವುದಾಗಿ ಓಎಲ್‍ಎಕ್ಸ್‍ನಲ್ಲಿ ಹೇಳಿಕೊಂಡಿದ್ದ ಅಪರಿಚಿತರು ನಗರದ ವ್ಯಕ್ತಿಗೆ 79 ಸಾವಿರ ರೂಪಾಯಿ ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಹುಬ್ಬಳ್ಳಿಯ ಮಹ್ಮದಜಾಫರ ಶೇಖ ಎಂಬಾತನೇ ಮೋಸಕ್ಕೆ ಒಳಗಾದ ವ್ಯಕ್ತಿ. ಸುಕೋ ಬ್ಯಾಂಕ್ ಖಾತೆಯಿಂದ ಪೋನ್ ಪೇ ಮೂಲಕ 79.180 ರೂಪಾಯಿಗಳನ್ನ ಅಪರಿಚಿತರಿಗೆ ಹಾಕಿದ್ದಾನೆ. ಆಮೇಲೆ ಅವರು ನಾಟ್ ರಿಚೇಬಲ್ ಆಗಿದ್ದಾರೆಂದು ಸೈಬರ್ ಕ್ರೈಂನಲ್ಲಿ ದೂರು ದಾಖಲಿಸಿರುವ ಶೇಖ ಹೇಳಿಕೊಂಡಿದ್ದಾನೆ