ಐದು ರೂಪಾಯಿಗಾಗಿ ಹೊಡೆದಾಟ

ಐದು ರೂಪಾಯಿ ಚಿಲ್ಲರೇ ಹಣಕ್ಕಾಗಿ ಸಾರಿಗೆ ಬಸ್ ನಲ್ಲಿ ಹೊಡೆದಾಡಿಕೊಂಡ ಘಟನೆ ಕಿಮ್ಸ್ ಬಳಿ ನಡೆದಿದೆ. ಹುಬ್ಬಳ್ಳಿ ತಾಲೂಕಿನ ಹೆಬಸೂರು ಗ್ರಾಮದ ಮಂಜುನಾಥ ಕೀಮ್ಸ್ ಗೆ ಹೋಗುವಾಗ ಕಂಡಕ್ಟರ್ ಐದು ರೂಪಾಯಿ ಚಿಲ್ಲರೇ ಕೇಳಿದ್ದಾನೆ. ಚಿಲ್ಲರೇ ಇಲ್ಲವೆಂದು ಮಂಜುನಾಥ ಹೇಳಿದಾಗ ಆತನಿಗೆ ಕೆಳಗೆ ಇಳಿಯುವಂತೆ ಕಂಡಕ್ಟರ್ ಹೇಳಿದ್ದಾನೆ. ಇದರಿಂದ ಮಾತಿನ ಚಕಮಕಿ ನಡೆದು ಮಂಜುನಾಥನಿಗೆ ಥಳಿಸಲಾಗಿದೆ. ಹೀಗಾಗಿ ಮಂಜುನಾಥ ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾನೆ.