ರಾಜ್ಯಾಧ್ಯಂತ ಜಿಪಂ, ತಾಪಂ ಕ್ಷೇತ್ರ ವಿಗಂಡನೆ: ಚುನಾವಣಾ ಆಯೋಗದ ಮಹತ್ವದ ಆದೇಶ..!
1 min readಬೆಂಗಳೂರು: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿ ಕ್ಷೇತ್ರಗಳು ಹೆಚ್ಚಾಗಲಿದ್ದು, ಸಂಪೂರ್ಣವಾದ ಕ್ಷೇತ್ರ ವಿಗಂಡನೆಗೆ ರಾಜ್ಯ ಚುನಾವಣಾ ಆಯೋಗ ಮುಂದಾಗಿದ್ದು, ಇದಕ್ಕಾಗಿ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸಧ್ಯ ರಾಜ್ಯದಲ್ಲಿರುವ ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿ ಕ್ಷೇತ್ರಗಳನ್ನ ಜನಸಂಖ್ಯೆ ಆಧಾರದ ಮೇಲೆ ವಿಗಂಡನೆ ಮಾಡುವಂತೆ ಚುನಾವಣಾ ಆಯೋಗ ನಿರ್ದೇಶನ ನೀಡಿದೆ. ಜಿಲ್ಲಾವಾರು ಮತ್ತು ತಾಲೂಕುವಾರು ಕ್ಷೇತ್ರಗಳು ಎಷ್ಟು ಹೆಚ್ಚಾಗಿವೆ ಎಂಬುದನ್ನ ವಿವರವಾಗಿ ನೀಡಿರುವ ಆಯೋಗ, ಸಮಗ್ರವಾದ ನಕ್ಷೆಯ ಸಮೇತ ಮಾಹಿತಿ ನೀಡುವಂತೆ ನಿರ್ದೇಶನ ನೀಡಿದೆ.
ಧಾರವಾಡ ಜಿಲ್ಲೆಯಲ್ಲಿ ಎರಡು ತಾಲೂಕು ಪಂಚಾಯತಿಗಳು ಅಸ್ತಿತ್ವಕ್ಕೆ ಬಂದಿರುವುದರಿಂದ ಅಳ್ನಾವರ ಮತ್ತು ಅಣ್ಣಿಗೇರಿ ತಾಲೂಕು ಪಂಚಾಯತಿ ಕ್ಷೇತ್ರಗಳ ಬಗ್ಗೆಯೂ ವಿವರಣೆಯನ್ನ ಆಯೋಗ ಕೇಳಿದೆ.
ತಾಲೂಕು ಪಂಚಾಯತಿಯನ್ನ ರದ್ದು ಮಾಡಲಾಗುವುದು ಎಂಬ ಊಹಾಪೋಹ ಈ ಮೂಲಕ ಕೇವಲ ವದಂತಿಯಾಗಿಯೇ ಉಳಿಯಲಿದೆ. ಕ್ಷೇತ್ರ ವಿಗಂಡನೆಯಿಂದ ಚುನಾವಣಾ ಅಭ್ಯರ್ಥಿಗಳು ಹೆಚ್ಚಾಗಲಿದ್ದಾರೆ.