Posts Slider

Karnataka Voice

Latest Kannada News

ರಾಜ್ಯದ ಜಿಲ್ಲಾ ಪಂಚಾಯತಿ-ತಾಲೂಕು ಪಂಚಾಯತಿ ಮೀಸಲು ಪ್ರಕಟ…!

1 min read
Spread the love

ಬೆಂಗಳೂರು: ರಾಜ್ಯದ ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿ ಸ್ಥಾನಗಳಿಗೆ ಚುನಾವಣೆ ಆಯೋಗ ಮೀಸಲಾತಿ ಪ್ರಕಟಿಸಿದೆ.

ರಾಜ್ಯದ ಎಲ್ಲ 31 ಜಿಲ್ಲೆಗಳ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳಿಗೆ ಮೀಸಲಾತಿ ಪ್ರಕಟಿಸಲಾಗಿದೆ. ಈ ಕುರಿತು ಅಧಿಸೂಚನೆ ಹೊರಬಿದ್ದಿದೆ.

ನಿನ್ನೆಯಷ್ಟೇ ರಾಜ್ಯ ಸರಕಾರ ಕೊರೋನಾ ಹಿನ್ನೆಲೆಯಲ್ಲಿ ಆರು ತಿಂಗಳು ಚುನಾವಣೆಯನ್ನ ಮುಂದೂಡುವಂತೆ ಮನವಿ ಮಾಡಿಕೊಂಡ, ಮರುದಿನವೇ ಮೀಸಲಾತಿ ಪ್ರಕಟವಾಗಿದ್ದು, ಹುಬ್ಬೇರಿಸುವಂತೆ ಮಾಡಿದೆ.

ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಚುನಾವಣೆಗಳು ಮುಂದೆ ಹೋಗುತ್ತವೆ ಎಂದುಕೊಂಡು ಎಲ್ಲರೂ ವಿಚಾರ ಮಾಡುತ್ತಿದ್ದ ಸಮಯದಲ್ಲೇ ಮೀಸಲಾತಿ ಪ್ರಕಟಗೊಂಡಿದ್ದು, ರಾಜಕೀಯ ಮೊಗಸಾಲೆಯಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗಲಿದೆ.


Spread the love

Leave a Reply

Your email address will not be published. Required fields are marked *