ಜಿಪಂ ಅಧ್ಯಕ್ಷ ಚುನಾವಣೆ: ಬಿಜೆಪಿ ಸದಸ್ಯರ ಕಿಡ್ನಾಪ್: ಕಾರ್ಯಕರ್ತರಿಂದ ಕಲ್ಲೂ ತೂರಾಟ…
ವಿಜಯಪುರ: ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸ್ಥಾನ ಚುನಾವಣೆಯಲ್ಲಿ ಬಿಜೆಪಿ ಸದಸ್ಯರನ್ನು ಕಾಂಗ್ರೆಸ್ ನವರು ಕಿಡ್ನಾಪ ಮಾಡಿದ್ದಾರೆ ಎಂದು ಆರೋಪಿ ಸದಸ್ಯರು ಕರೆತರುತ್ತಿದ್ದ ಬಸ್ ಮೇಲೆ ಬಿಜೆಪಿ ಕಾರ್ಯಕರ್ತರು ಕಲ್ಲೂ ತೂರಾಟ ಮಾಡಿರುವ ಘಟನೆ ವಿಜಯಪುರ ಜಿಲ್ಲಾ ಪಂಚಾಯ್ತಿ ಆವರಣದಲ್ಲಿ ನಡೆದಿದೆ.
ಕಾಂಗ್ರೆಸ್ ಶಾಸಕರು ಹಾಗೂ ಮುಖಂಡರು ಸೇರಿಕೊಂಡು ಬಿಜೆಪಿ ಜಿಪಂ ಸದಸ್ಯರ ಕಿಡ್ನ್ಯಾಪ್ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ ವಿಜುಗೌಡ ಆರೋಪಿಸಿದ್ದಾರೆ. ಅಲ್ಲದೇ, ಜಿಪಂ ಸದಸ್ಯರನ್ನ ಕರೆತರುತ್ತಿದ್ದ ಬಸ್ ನ್ನು ಬಿಜೆಪಿ ಶಾಸಕರು ಹಾಗೂ ಮುಖಂಡರಿಂದ ತಡೆದು ಘೇರಾವ ಹಾಕಿದ್ದಾರೆ. ಬಸ್ ಮೇಲೆ ಕಲ್ಲೂ ತೂರಾಟಕ್ಕೆ ಬಸ್ಸಿನ ಗಾಜು ಪುಡಿ ಪುಡಿ ಆಗಿವೆ. ಇನ್ನು ಸ್ಥಳದಲ್ಲಿ ಉದ್ವಿಘ್ನ ನಿರ್ಮಾಣವಾಗದಂತೆ ಪೊಲೀಸ್ ರಿಂದ ಲಾಠಿ ಪ್ರಹಾರ ಮಾಡಿದ್ದಾರೆ. ಅಲ್ಲದೇ, ಕಲ್ಲೂ ತೂರಾಟದಲ್ಲಿ ಪೊಲೀಸ್ ಸಿಬ್ಬಂದಿ ಸೇರಿ ಹಲವರಿಗೂ ಗಾಯಗಳಾಗಿದ್ದು, ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಬಿಜೆಪಿ ಮುಖಂಡ ವಿಜುಗೌಡ ಹಾಗೂ ಎಂಬಿಪಿ ನಡುವೆ ಮಾತಿನ ಚಕಮಕಿ ಕೂಡ ನಡೆದಿದೆ.