‘ಝೀರೋ ಟ್ರಾಫಿಕ್’ ಹೀರೋಗಳಾದ ‘ಹುಬ್ಬಳ್ಳಿ ಪೊಲೀಸ್”…!
1 min readಹುಬ್ಬಳ್ಳಿ: ಮಾನವನ ಅಂಗಾಂಗ ಕಸಿ ಮಾಡುವ ಉದ್ದೇಶದಿಂದ ಧಾರವಾಡದ ಎಸ್ ಡಿಎಂ ಆಸ್ಪತ್ರೆಯಿಂದ ಹೊರಟಿದ್ದ ಅಂಗಾಂಗಳನ್ನ ಕೇವಲ ಹತ್ತು ನಿಮಿಷದಲ್ಲಿ ವಿಮಾನ ನಿಲ್ದಾಣ ತಲುಪುವಂತೆ ಮಾಡುವಲ್ಲಿ ಹುಬ್ಬಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಧಾರವಾಡದ ಎಸ್.ಡಿ.ಎಂ ಆಸ್ಪತ್ರೆಯವರು ಒಂದು ಗಂಟೆ ಮೊದಲೇ ನೀಡಿದ ಮನವಿ ಮೇರೆಗೆ ಹಾಗೂ ಅಂಗಾಂಗ ಕಸಿ ಪ್ರಾಧಿಕಾರದ ನಿಯಮದಂತೆ ಎಸ್.ಡಿ.ಎಂ ಆಸ್ಪತ್ರೆಯಿಂದ ಲಿವರ್ ಅಂಗವನ್ನು ಹುಬ್ಬಳ್ಳಿ ವಿಮಾನ ನಿಲ್ದಾಣದವರೆಗೆ 16 ಕಿ.ಮೀ ಅಂತರವನ್ನು ಸಾಧ್ಯವಾದಷ್ಟು ಬೇಗ ಗ್ರೀನ್ ಕಾರಿಡಾರ್ ವ್ಯವಸ್ಥೆ ಮೂಲಕ ಸಾಗಿಸಲಾಯಿತು.
ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ವತಿಯಿಂದ ಅಗತ್ಯ ಪೊಲೀಸ್ ಬೆಂಗಾವಲು ಸೇವೆಯನ್ನು ಒದಗಿಸಲಾಯಿತು. ಗ್ರೀನ್ ಕಾರಿಡಾರ್ (ಜೀರೋ ಟ್ರಾಫಿಕ್) ಗೆ ಸಹಕರಿಸಿದ ನಾಗರಿಕರಿಗೆ ಹಾಗೂ ಅಂಗಾಂಗ ಕಸಿ ದಾನ ಮಾಡಿದ ಕುಟುಂಬದವರಿಗೆ ಪೊಲೀಸ್ ಇಲಾಖೆ ಧನ್ಯವಾದ ತಿಳಿಸಿದೆ.