ವಕ್ಫ್ ಬೋರ್ಡ್ ಹಣ: ಜಮೀರ ಅಹ್ಮದ ಹೇಳಿಕೆ: ಸಂವಿಧಾನ ವಿರೋಧಿ: ಸಿ.ಟಿ.ರವಿ ಹೇಳಿಕೆ
ಬೆಂಗಳೂರು: ವಕ್ಪ್ ಬೋರ್ಡ್ ಹಣವನ್ನ ಮರಳಿ ರಾಜ್ಯಸರ್ಕಾರ ತೆಗೆದುಕೊಳ್ಳಬಾರದು ಶಾಸಕ ಜಮೀರ್ ಹೇಳಿಕೆ ವಿಚಾರವಾಗಿ ಮಾತನಾಡಿದ ಸಚಿವ ಸಿ.ಟಿ.ರವಿ, ಇದು ಸಂವಿಧಾಮ ವಿರೋಧಿ ಹೇಳಿಕೆಯಾಗಿದೆ. ಡಿಸ್ಕ್ರಿಮಿನೇಟ್ ಮಾಡೋದಕ್ಕೆ ಸಂವಿಧಾನದಲ್ಲಿ ಅವಕಾಶ ಇಲ್ಲ. ಸೋ ಕಾಲ್ಡ್ ಸೆಕ್ಯೂಲರ್ಸ್ ನೀತಿಗೆ ವಿರುದ್ದವಾದ ಹೇಳಿಕೆಯಾಗಿದೆ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.
ಮಾನವೀಯತೆಗೆ ವಿರುದ್ದವಾಗಿ ಜಾತಿಯನ್ನ ಪ್ರತಿಬಿಂಬಿಸುವ ಹೇಳಿಕೆ ಕೊಟ್ಟಿದ್ದಾರೆ. ಇದು ಜಮೀರ್ ಹೇಳಿಕೆಯೋ, ಕಾಂಗ್ರೆಸ್ ಪಕ್ಷದ ಹೇಳಿಕೆಯೋ. ಕಾಂಗ್ರೆಸನವ್ರು ಯಾರೂ ಇದರ ಬಗ್ಗೆ ಪ್ರತಿಕ್ರಿಯೆ ಕೊಡ್ತಿಲ್ಲ. ಮತಾಂಧತೆಯ ಉನ್ಮತ್ತತೆಯಲ್ಲಿ ಬಡಾಯಿಸುತ್ತಿರೋದು. ವಕ್ಫ್ ಬೋರ್ಡ್ ಸರ್ಕಾರಕ್ಕಿಂತ ದೊಡ್ಡದಲ್ಲ. ವಕ್ಫ್ ಬೋರ್ಡ್ ಗೆ ಕೊಡೋದು ಸಾರ್ವಜನಿಕರ ಹಣ. ಅವ್ರು ಇನ್ನೂ ಜಿನ್ನಾ ಮಾನಸಿಕತೆಯಿಂದ ಹೊರ ಬಂದಿಲ್ಲ. ಜಕಾತ್ ಕೊಟ್ಟು ಡೆಪಾಸಿಟ್ ಮಾಡಿರುವ ಹಣ ಅಲ್ಲ. ಜಮೀರ್ ಅವ್ರು ಕೊಡೋ ಜಕಾತ್ ಹಣವನ್ನ ನಾವು ಕೇಳಲ್ಲ. ವಕ್ಫ್ ಹಣವನ್ನ ಹೇಗೆ ಖರ್ಚು ಮಾಡಬೇಕು ಅಂತ ಹೇಳೋ ಅಧಿಕಾರ ಜಮೀರ್ ಗೆ ಇಲ್ಲ. ಅವ್ರ ಜಾತ್ಯಾತೀತತೆಯ ಮಾತು ಕೇವಲ ನಾಟಕತನ ಎಂದು ಸಿ.ಟಿ ರವಿ ಕಿಡಿಕಾರಿದ್ದಾರೆ.