Posts Slider

Karnataka Voice

Latest Kannada News

ಕಲಬುರಗಿಯಲ್ಲಿ ಪವರ್ ಸ್ಟಾರ್.. ಹೆಂಗಿದೆ ಗೊತ್ತಾ ಗಮ್ಮತ್ತು…!

Spread the love

ಕಲಬುರಗಿ: ಯುವರತ್ನ ಯುವ ಸಂಭ್ರಮಕ್ಕಾಗಿ ನಗರಕ್ಕೆ ಆಗಮಿಸಿರುವ ಪವರ್ ಸ್ಟಾರ್ ಪುನೀತ ರಾಜಕುಮಾರ ಅದ್ಧೂರಿ ಸ್ವಾಗತವನ್ನ ಅಭಿಮಾನಿಗಳು ನೀಡಿದ್ದು, ಅಭಿಮಾನಿಗಳ ಪ್ರೀತಿಯಿಂದ ಸುರಿಸಿದ ಹೂಮಳೆಯಿಂದ ಬಿಸಿಲಲ್ಲೂ ನೆನೆದ ಪುನೀತರಾಜಕುಮಾರ.

ಪುನೀತಗೆ ಸ್ವಾಗತದ ರೀತಿಯಿಲ್ಲಿದೆ ನೋಡಿ..

ಜೈ ಕಲಬುರಗಿ ಅಂತಾ ಕೂಗಿ ಅಭಿಮಾನಿಗಳತ್ತ ಕೈ ಬೀಸಿದ ಯುವರತ್ನ. ಕಲಬುರಗಿಯ ಶ್ರೀ ಶರಣಬಸವೇಶ್ವರ ದೇಗುಲದ ಆವರಣದಲ್ಲಿ ನಟ ಪುನಿತ್ ರಾಜಕುಮಾರ ಪ್ರತಿಕ್ರಿಯೆ ನೀಡಿದ್ದು, ನಾನು ಚಿಕ್ಕವನಿದ್ದಾಗ ಅಪ್ಪಾಜಿ ಜೊತೆ ಕಲಬುರಗಿಗೆ ಆಗಮಿಸಿದ್ದೆ. ಅವರೊಟ್ಟಿಗೆ ಈ ನೆಲದ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದೆ. ನಾನು ದೊಡ್ಡವನಾದ ನಂತರ ಕಲಬುರಗಿಗೆ ಎರಡ್ಮೂರು ಸಲ ಬಂದಿದ್ದೇನೆ. ಇದೀಗ ಕೋವಿಡ್ ಲಾಕ್‌ಡೌನ್ ನಂತರ ಮೊದಲ ಬಾರಿ ಪ್ರವಾಸ ಕೈಗೊಂಡು ಕಲಬುರಗಿಗೆ ಬಂದಿದ್ದೇನೆ. ನಿಮ್ಮ ಅಭಿಮಾನಕ್ಕೆ ನಾ ಸದಾ ಚಿರೃಣಿ ಎಂದರು.

ಮುಂದಿನ‌ ದಿನಗಳಲ್ಲಿ ಕಲಬುರಗಿಯಲ್ಲಿ ನನ್ನ ಅಭಿನಯದ ಕೆಲ ಚಿತ್ರಗಳ ಶೂಟಿಂಗ್‌ಗೆ ನಿರ್ಧರಿಸಿದ್ದೇನೆ. ಯುವರತ್ನ ಸಿನೇಮಾವನ್ನ ನೋಡಿ ಪ್ರೋತ್ಸಾಹಿಸಿ ಎಂದು ಅಭಿಮಾನಿಗಳಿಗೆ ಪುನೀತರಾಜಕುಮಾರ ಮನವಿ ಮಾಡಿಕೊಂಡರು.


Spread the love

Leave a Reply

Your email address will not be published. Required fields are marked *