Posts Slider

Karnataka Voice

Latest Kannada News

ಯೂಟ್ಯೂಬ್ ಪತ್ರಕರ್ತನ ಬಂಧನದ ಮೊದಲು “ಆಕೆಯನ್ನ” ಕರೆದ ಧಾರವಾಡದ ಪೊಲೀಸ್ ಯಾರೂ…!?

1 min read
Spread the love

ಯೂಟ್ಯೂಬ್ ಪತ್ರಕರ್ತನ ವಿರುದ್ಧ ದೂರು ನೀಡಿರುವ ಮಹಿಳೆಯ ಮೊದಲ ಪತಿ ಸಾವಿಗೀಡಾಗಿದ್ದಾನೆ. ಎರಡನೇಯ ಮದುವೆಯಾಗುವ ಮುನ್ನ ಆಟೋ ಚಾಲಕನೊಂದಿಗೆ ಮದುವೆಯಾಗುವ ಭರವಸೆಯಿಂದ ಆತನೊಂದಿಗೂ ಸಲುಗೆಯಿಂದ ನಡೆದುಕೊಂಡಿದ್ದಾಳೆ. ಇದಾದ ನಂತರ ಮತ್ತೋಬ್ಬರ ಮದುವೆಯಾಗಿದ್ದಾಳೆ. ಆತನ ವಿರುದ್ಧವೂ ದೂರು ನೀಡಿದ್ದಾಳೆ. ಸೋಗಿ ಎಂಬ ಪೊಲೀಸ್ ಕೂಡಾ ಈಕೆಯನ್ನ ಬಳಸಿಕೊಳ್ಳುವ ಯತ್ನ ಮಾಡಿದ್ದಾನೆ..

ಧಾರವಾಡ: ಗ್ರಾಮೀಣ ಭಾಗದ ಮಹಿಳೆಯೋರ್ವಳ ದೂರಿನ ಮೇಲೆ ಯೂಟ್ಯೂಬ್ ಪತ್ರಕರ್ತನ ಬಂಧನವಾಗಿದೆ. ಆದರೆ, ಅದೇ ಮಹಿಳೆ ಕೇವಲ 11ದಿನದ ಹಿಂದೆ ಪೊಲೀಸ್ ರೋರ್ವರ ಬಗ್ಗೆ ನೀಡಿದ್ದ ದೂರನ್ನ ಹಿರಿಯ ಅಧಿಕಾರಿಗಳು ಮುಚ್ಚಿಟ್ಟಿರುವುದು ಇದೀಗ ಬೆಳಕಿಗೆ ಬಂದಿದೆ.

ಹೌದು.. ಕರ್ನಾಟಕವಾಯ್ಸ್.ಕಾಂ ಗೆ ಲಭಿಸಿರುವ ಮಾಹಿತಿಯ ಪ್ರಕಾರ ಯೂಟ್ಯೂಬ್ ಪತ್ರಕರ್ತನ ವಿರುದ್ಧ ದೂರು ನೀಡಿರುವ ಮಹಿಳೆಯ ಮೊದಲ ಗಂಡ ಸಾವಿಗೀಡಾದ ನಂತರ ಮತ್ತೊಂದು  ಮದುವೆಯಾಗಿದ್ದಾಳೆ. ಅದೇ ಸಮಯದಲ್ಲಿ ಮತ್ತೊಂದು ಆಟೋ ಚಾಲಕನ ಜೊತೆ, ‘ಆತ’ ಮದುವೆಯಾಗುತ್ತೇನೆಂದಿದ್ದಕ್ಕೆ ಸಲುಗೆಯಿಂದ ಪೋಟೋ ತೆಗೆಸಿಕೊಂಡಿದ್ದಾಳೆ. ಅದನ್ನ ನೋಡಿದ ಎರಡನೇಯ ಗಂಡ ಇವಳಿಗೆ ಕಿರುಕುಳ ನೀಡಿದ್ದನಂತೆ,  ಆ  ಬಗ್ಗೆ ಪೊಲೀಸ್ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಮತ್ತೊಂದು ಪ್ರಕರಣ ನಡೆದಿದೆ.

ಮಹಿಳಾ ಠಾಣೆಯಲ್ಲಿದ್ದ ಸೋಗಿ ಎಂಬ ಪೊಲೀಸ್ “ಆಕೆ”ಗೆ ನಾನು ಕೊನೆತನಕ ಬದುಕು ಕೊಡತೇನಿ ಎನ್ನುತ್ತ ನಂಬರ ಪಡೆದು ಎಲ್ಲೆಂದರಲ್ಲಿ ಕರೆದು ಅನುಚಿತವಾಗಿ ವರ್ತನೆ ಮಾಡಿದ್ದಾರೆಂದು ಸ್ವತಃ ನೊಂದ ಮಹಿಳೆ ಧಾರವಾಡ ಗ್ರಾಮೀಣ ಠಾಣೆಯ ಡಿವೈಎಸ್ಪಿ ಅವರಿಗೆ ದೂರನ್ನ ನೀಡಿದ್ದಾಳೆ.

ಮೂಲತಃ ಇದೇಲ್ಲವೂ ಗೊತ್ತಿದ್ದ ಮಹಿಳಾ ಠಾಣೆಯ ಸಿಬ್ಬಂದಿಗಳು ಯಾವುದೇ ಕ್ರಮವನ್ನ ಜರುಗಿಸಿಲ್ಲ. ಇದೀಗ ಪೊಲೀಸರೇ ಪರಿಚಯ ಮಾಡಿದ್ದ ಯೂಟ್ಯೂಬ್ ಪತ್ರಕರ್ತ ಜೈಲಿಗೆ ಹೋಗಿದ್ದಾನೆ.

ತಪ್ಪು ಮಾಡಿದ್ದು ಯಾರೇ ಆದರೂ ಅದು ತಪ್ಪೆ. ಆದರೆ, ತಪ್ಪು ಮಾಡಿ ಪೊಲೀಸರಿದ್ದಾರೆಂಬ ಕಾರಣಕ್ಕೆ ಅವರನ್ನ ಬಿಡುವುದು ಅದ್ಯಾವ ನ್ಯಾಯ. ಗ್ರಾಮೀಣ ಭಾಗದ ಡಿವೈಎಸ್ಪಿಗೆ ಬರೆದಿರುವ ದೂರಿನ ಪ್ರತಿ ಕರ್ನಾಟಕವಾಯ್ಸ್.ಕಾಂ ಲಭಿಸಿದೆ.

ಯೂಟ್ಯೂಬ್ ಪತ್ರಕರ್ತ ತಪ್ಪು ಮಾಡಿದ್ದರೇ ಅವನಿಗೆ ಯಾವ ಕ್ರಮವಾಗಬೇಕೋ ಅದು ಆಗಲೇ ಬೇಕು. ಆದರೆ, ಅವನ ಸುತ್ತಲೂ ನಡೆದಿರುವ ಎಲ್ಲದರ ಬಗ್ಗೆಯೂ ಸಮಗ್ರ ತನಿಖೆಯಾಗಬೇಕು. ಸೋಗಿಯಂತ ಪೊಲೀಸನ ಬಗ್ಗೆಯೂ ವಿಚಾರಣೆ ನಡೆಯಬೇಕಲ್ಲವೇ.. ಅಷ್ಟೇ ಅಲ್ಲ, ಇನ್ನೂ ಇಬ್ಬರು ಪೊಲೀಸರಿದ್ದಾರೆಂಬ ಮಾಹಿತಿಯಿದೆ. ಅದನ್ನೂ ಹಿರಿಯ ಅಧಿಕಾರಿಗಳು ಹೊರಗೆ ಹಾಕಬೇಕಿದೆ.


Spread the love

Leave a Reply

Your email address will not be published. Required fields are marked *