ಎತ್ತಿನ ಸಮೇತ ನೀರಲ್ಲಿ ಹೋದವರ ಶವ ಪತ್ತೆ: ಯುವಕರ ದುರಂತ ಸಾವು
ಹಾವೇರಿ: ಕಳೆದ ಎರಡು ದಿನಗಳ ಹಿಂದೆ ಎತ್ತುಗಳ ಮೈ ತೊಳೆಯಲು ಹೋದಾಗ ಚಕ್ಕಡಿ ಸಮೇತ ನೀರಿನಲ್ಲಿ ಕೊಚ್ಚಿ ಹೋಗಿದ್ದ ಯುವಕರಿಬ್ಬರು ಶವವಾಗಿ ದೊರಕಿದ್ದು, ಕುಟುಂದವರ ಆಕ್ರಂದನ ಮುಗಿಲುಮುಟ್ಟಿದೆ.
ಸೆಪ್ಟಂಬರ್ 21 ರಂದು ತುಂಗಭದ್ರಾ ನದಿಯಲ್ಲಿ ಕೊಚ್ಚಿ ಹೋಗಿದ್ದ ಇಬ್ಬರು ಯುವಕರ ಮೃತದೇಹ ಪತ್ತೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಸೋಮಲಾಪುರ ಗ್ರಾಮದ ಬಳಿ ದೊರಕಿವೆ.
ಕೋಣನತಂಬಗಿ ಗ್ರಾಮದ ನದಿಯಲ್ಲಿ ಎತ್ತಿನ ಮೈ ತೊಳೆಯಲು ಹೋಗಿದ್ದ ವೇಳೆ ಎತ್ತಿನಬಂಡಿ ಸಮೇತ ಕೊಚ್ಚಿ ಹೋಗಿದ್ದ ಜಗದೀಶ ಅಣ್ಣೇರ (24 ವರ್ಷ) ಮತ್ತು ಬೆಟ್ಟಪ್ಪ ಮಿಳ್ಳಿ (23 ವರ್ಷ) ಶವವಾಗಿ ಪತ್ತೆಯಾಗಿದ್ದಾರೆ.
ಚಕ್ಕಡಿ ನೀರಿನ ೊಂದು ಬದಿಯಲ್ಲಿ ನಿಂತಿದ್ದಾದರೂ ಎತ್ತುಗಳು ಘಟನೆಯ ದಿನವೇ ಸಿಕ್ಕಿದ್ದವು. ಇದೀಗ ನಿರಂತರವಾಗಿ ಅಗ್ನಿಶಾಮಕ ದಳ ಮತ್ತು ಪೊಲೀಸರು ಕಾರ್ಯಾಚರಣೆ ನಡೆಸಿ, ಮೃತದೇಹಗಳನ್ನ ಪತ್ತೆ ಹಚ್ಚಿದ್ದಾರೆ.
ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.