ಹುಬ್ಬಳ್ಳಿ ನವನಗರದ “ಆರು ಹುಡುಗರು” ಕಾಡಿನಲ್ಲಿ ಪತ್ತೆ: ಆತಂಕ ಮೂಡಿಸಿದ್ದ ಪ್ರಕರಣ…!

ಉತ್ತರಕನ್ನಡ: ಹುಬ್ಬಳ್ಳಿಯ ನವನಗರದಿಂದ ಪ್ರವಾಸ ಸ್ಥಳ ನೋಡಲು ಬಂದಿದ್ದ ಆರು ಯುವಕರು ನಿನ್ನೆಯಿಂದಲೇ ನಾಪತ್ತೆಯಾಗಿದ್ದ ಘಟನೆ ಆತಂಕ ಮೂಡಿಸಿತ್ತು. ಇದೀಗ ಆರು ಯುವಕರು ಕಾಡಿನಲ್ಲಿ ಪತ್ತೆಯಾಗಿದ್ದಾರೆ.

ನಿನ್ನೆ ನವನಗರದಿಂದ ಹೋಗಿದ್ದ ಆಸೀಫ ಮಕಬುಲಸಾಬ ಡಾಲಾಯಿತ್, ಅಹ್ಮದ ಸೈಯ್ಯದ ಶೇಖ, ಅಬತಾಬ್ ಸದ್ದಾಂ ಶಿರಹಟ್ಟಿ, ಮಾಬುಸಾಬ ಮಕಬುಲಸಾಬ ಶಿರಹಟ್ಟಿ, ಶಾನು ಬಿಜಾಪುರಿ ಹಾಗೂ ಇಮ್ತಿಯಾಜ್ ನೀರಸಾಬ ಮುಲ್ಲಾನವರ ಎಂಬುವವರೇ ನಾಪತ್ತೆಯಾಗಿದ್ದರು.
ನಿನ್ನೆ ದಿನ ಯಲ್ಲಾಪುರ ಸಮೀಪದ ಶಿರ್ಲೆ ಪಾಲ್ಸ್ ಬಳಿಯಲ್ಲಿ ಇವರ ಮೂರು ಸ್ಕೂಟಿಗಳು ಸಿಕ್ಕಿದ್ದು, ಯುವಕರು ನಾಪತ್ತೆಯಾಗಿದ್ದಾರೆಂದು ಮಾಹಿತಿ ಸಿಗುತ್ತಿದ್ದ ಹಾಗೇ ಯಲ್ಲಾಪುರ ಠಾಣೆಯ ಇನ್ಸಪೆಕ್ಟರ್ ಸುರೇಶ ಯಳ್ಳೂರು, ಹುಡುಕಾಟ ಆರಂಭಿಸಿದ್ದರು.
ಇಂದು ಬೆಳಿಗ್ಗೆಯಿಂದ ಡಿಎಸ್ಪಿ ರವಿ ನಾಯಕ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯಾಚರಣೆಯನ್ನ ನಡೆಸಿದಾಗ ಆರು ಯುವಕರು ಪತ್ತೆಯಾಗಿದ್ದಾರೆ. ಕಾಡಿನಲ್ಲಿ ಅಲೆಯುತ್ತಿದ್ದ ಸಮಯದಲ್ಲಿ ಸಿಕ್ಕು ಬಿದ್ದಿದ್ದಾರೆ. ಸಿಕ್ಕಿರುವ ಯುವಕರನ್ನ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ.