ಶಹರಕ್ಕೆ ಇಮ್ರಾನ್, ಗ್ರಾಮೀಣಕ್ಕೆ ವಿನೋದ ಅಸೂಟಿ..? – ಕೈ ಪದಾಧಿಕಾರಿಗಳ ಆಯ್ಕೆ ಇಂದು ಘೋಷಣೆ..!

ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ಮತ್ತು ಧಾರವಾಡ ಗ್ರಾಮೀಣ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಗಳ ಪದಾಧಿಕಾರಿಗಳ ಆಯ್ಕೆಗೆ ನಡೆದ ಚುನಾವಣೆಯ ಫಲಿತಾಂಶ ಇಂದು ಸಂಜೆಯೊಳಗೆ ಬರಲಿದ್ದು, ಗ್ರಾಮೀಣದಲ್ಲಿ ವಿನೋದ ಅಸೂಟಿ, ಮಹಾನಗರದಲ್ಲಿ ಇಮ್ರಾನ್ ಯಲಿಗಾರ ಮತ್ತೆ ಅಧ್ಯಕ್ಷರಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಮಹಾನಗರ ಜಿಲ್ಲಾ ಯುವ ಕಾಂಗ್ರೆಸ್ ಗೆ ಜನೇವರಿ 11ರಂದು ಮತದಾನ ನಡೆದಿತ್ತು. ಅಧ್ಯಕ್ಷ ಸ್ಥಾನಕ್ಕೆ ಇಮ್ರಾನ ಎಲಿಗಾರ ಹಾಗೂ ಚೇತನ ಬಿಜವಾಡ ನಡುವೆ ಸ್ಪರ್ಧೆಯಿದೆ. ಇನ್ನುಳಿದಂತೆ ಫಾರೂಕ ಕಾಲೆಬುಡ್ಡೆ, ಸದಾನಂದ ಕುಲಕರ್ಣಿ, ಅಬ್ದುಲ್ ಸಾವಂತನವರ, ಶ್ರೇಯಾ ಹಿರೇಕೆರೂರ, ಪೂರ್ಣಿಮಾ ಸವದತ್ತಿ, ಸಂಗಮೇಶ ಕ್ಯಾತನವರ ಸೇರಿದಂತೆ 10 ಜನರು ಸ್ಪರ್ಧೆ ಮಾಡಿದ್ದಾರೆ.
ಧಾರವಾಡ ಗ್ರಾಮೀಣ ಜಿಲ್ಲಾ ಯುವ ಕಾಂಗ್ರೆಸ್ ಚುನಾವಣೆ ಜನೇವರಿ 12ರಂದು ನಡೆದಿತ್ತು. ಅಧ್ಯಕ್ಷ ಸ್ಥಾನಕ್ಕಾಗಿ ಹಾಲಿ ಯುವ ಕಾಂಗ್ರೆಸ್ ಅಧ್ಯಕ್ಷ ವಿನೋದ ಅಸೂಟಿ ವಿರುದ್ಧವಾಗಿ ನವೀನ ಸೋನಾರ ಹಾಗೂ ದೇವರಾಜ ಪರಸಪ್ಪನವರ ಸ್ಪರ್ಧೆ ಮಾಡಿದ್ದಾರೆ.
ಚುನಾವಣೆಯಲ್ಲಿ ಹೆಚ್ಚು ಮತ ಪಡೆದವರು ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ. ನಂತರದ ಸ್ಥಾನವನ್ನ ಪಡೆದವರು ಕ್ರಮವಾಗಿ ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿಯಾಗಲು ಅವಕಾಶವಿದೆ.
ಇಂದು ಸಂಜೆಗೆ ಫಲಿತಾಂಶ ಹೊರಬೀಳಲಿದ್ದು, ಯುವ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.