ಯುವ ಕಾಂಗ್ರೆಸ್ ಚುನಾವಣೆ: “IT” ಸಹೋದರ “ಇಕ್ಬಾಲ್ ತಮಾಟಗಾರ” ಭರ್ಜರಿ ಗೆಲುವು… ಯುವ ಕಾಂಗ್ರೆಸ್‌ಗೆ ಜಿಲ್ಲಾಧಿಪತಿ….!!!

ಬೆಂಗಳೂರು: ಯುವ ಕಾಂಗ್ರೆಸ್ ಚುನಾವಣೆಯ ಫಲಿತಾಂಶ ಕೊನೆಗೂ ಹೊರ ಬಂದಿದ್ದು, ಹಾಲಿ ಶಾಸಕರ ಪ್ರಯತ್ನ ವಿಫಲವಾಗಿ ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಾಟಗಾರ ಸಹೋದರ ಭರ್ಜರಿ ಜಯ ಸಾಧಿಸಿದ್ದಾರೆ.
ಯುವ ಕಾಂಗ್ರೆಸ್ ಚುನಾವಣೆ ಸಮಯದಲ್ಲಿ ಹಲವು ಗೊಂದಲಗಳಲ್ಲಿ ಸಿಲುಕಿಸುವ ಗೊಂದಲ ಸೃಷ್ಟಿ ಮಾಡುವ ಯತ್ನ ನಡೆಯುತ್ತಿದ್ದರೂ, ಇಕ್ಬಾಲ್ ತಮಾಟಗಾರ 6087 ಮತಗಳನ್ನ ಪಡೆದು ಜಯಗಳಿಸಿದ್ದಾರೆ.
ಮಾಜಿ ಶಾಸಕರ ಕುಟುಂಬದ ಕುಡಿಯಾಗಿದ್ದ ಸೂರಜ್ ಪುಡಕಲಕಟ್ಟಿ ಅವರು 3583 ಮತಗಳನ್ನ ಪಡೆದು ಹಿನ್ನಡೆ ಅನುಭವಿಸುವ ಜೊತೆಗೆ ಉಪಾಧ್ಯಕ್ಷ ಸ್ಥಾನಕ್ಕೆ ಸಿಮೀತವಾಗಿದ್ದಾರೆ. ಸೂರಜ್ ಗೆಲುವಿಗೆ ಹಾಲಿ ಶಾಸಕರು ಸಾಕಷ್ಟು ಪ್ರಯತ್ನ ಮಾಡಿದ್ದರೂ, ಯಾವುದೇ ಪ್ರಯೋಜನ ಆಗಿಲ್ಲವೆಂದು ಹೇಳಲಾಗುತ್ತಿದೆ.
ಅನಿಲಕುಮಾರ ಪಾಟೀಲ ಅವರ ಪುತ್ರ ಹಾಗೂ ಮಾಜಿ ಶಾಸಕ ದಿವಂಗತ ಸಿ.ಎಸ್.ಶಿವಳ್ಳಿ ಅವರ ಪುತ್ರ ಕೂಡಾ ತಮ್ಮ ತಮ್ಮ ಕ್ಷೇತ್ರದಲ್ಲಿ ಜಯಗಳಿಸುವ ಮೂಲಕ ಅಖಾಡದಲ್ಲಿ ಛಾಪು ಮೂಡಿಸಿದ್ದಾರೆ.