ಯುಥ್ ಕಾಂಗ್ರೆಸ್ ಚುನಾವಣೆ ಮುಗಿದು ತಿಂಗಳುಗಳೇ ಕಳೆದ್ರೂ “ಬಾರದ ಫಲಿತಾಂಶ”- ಇದ್ದೂ ಇಲ್ಲದಂತಾದ ಯುವ ಕಾಂಗ್ರೆಸ್….!!!
1 min readಯುವ ಕಾಂಗ್ರೆಸ್ ಚುನಾವಣೆ ಅಬ್ಬರ
ಮುಗಿದು ಹೋಗಿ ತಿಂಗಳುಗಳೇ ಕಳೆದಿವೆ
ಬೆಂಗಳೂರು: ಯುವ ಕಾಂಗ್ರೆಸ್ ಚುನಾವಣೆ ಮುಗಿದು ಹಲವು ತಿಂಗಳುಗಳೇ ಕಳೆದರೂ, ಇಲ್ಲಿಯವರೆಗೆ ಫಲಿತಾಂಶ ಬಾರದೇ ಇರುವುದರಿಂದ ರಾಜ್ಯದಲ್ಲಿ ಯುವ ಕಾಂಗ್ರೆಸ್ ಇರುವಿಕೆಯ ಗೊಂದಲ ಮುಂದುವರೆದಿದೆ.
ರಾಜ್ಯದ ಬಹುತೇಕ ಜಿಲ್ಲೆಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ, ತಾಲ್ಲೂಕು ಅಧ್ಯಕ್ಷರಾಗುವ ಕನಸು ಕಂಡವರ ಸ್ಥಿತಿ ಅಯೋಮಯವಾಗಿದೆ.
ಯುವ ಕಾಂಗ್ರೆಸ್‌ನ ಯುವಕರಿಗೆ ಇಂತಹ ಸ್ಥಿತಿ ಬಂದಿರುವುದಕ್ಕೆ ಕಾರಣವೇನು ಎಂಬುದು ಮಾತ್ರ ನಿಗೂಢವಾಗಿದೆ.