ಸಾವಿನಅನುಭವ ಪಡೆಯಲು ಹೋಗಿ ಆತ್ಮಹತ್ಯೆ ಮಾಡಿಕೊಂಡ ನತದೃಷ್ಟ ಯುವಕ
ತುಮಕೂರು: ಸಾವಿನ ಅನುಭವ ಪಡೆಯಲು ಹೋಗಿ ಆತ್ಮಹತ್ಯೆ ಗೆ ಶರಣಾದ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಗೌರಗಾನಹಳ್ಳಿಯಲ್ಲಿ ಸಂಭವಿಸಿದೆ.
ಸಾಯುವ ಮುನ್ನ ಟಿಕ್ ಟಾಕ್ ವೀಡಿಯೋ ಮಾಡಿಕೋಂಡಿರುವ ಧನಂಜಯ್ಯ ೆಂಬ ಯುವಕ, ತಾನು ಸಾವಿನ ಅನುಭವ ಪಡೆಯಬೇಕಿದೆ ಎಂದು ಹೇಳಿಕೊಂಡಿದ್ದಾನೆ. ಯಾವ ಕಾರಣಕ್ಕಾಗಿ ಇಂತಹ ಯೋಚನೆ ಬಂತು ಎಂಬುದನ್ನ ಹೇಳದಿರುವ ಯುವಕ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯುವಕನ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ.