ಹುಬ್ಬಳ್ಳಿಯ ಕೇಬಲ್ ನೆಟ್‌ವರ್ಕಿಗೆ “ಖದರ್ ತಂದಿದ್ದ” ವೈ.ಯೋಹಾನ್ ಇನ್ನಿಲ್ಲ….

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಕೇಬಲ್ ದುನಿಯಾಗೆ ಹೊಸದೊಂದು ರೂಪ ಕೊಟ್ಟು ಕೇಬಲ್ ಕಿಂಗ್ ಎನಿಸಿಕೊಂಡಿದ್ದ ಯೇಶಮಲ್ಲಾ ಯೋಹಾನ್ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಮೃತರ ಅಂತ್ಯಕ್ರಿಯೆ ಇಂದು ಸಂಜೆ ನಾಲ್ಕು ಗಂಟೆಗೆ ಗದಗ ರಸ್ತೆಯ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದ್ದು, ಯೋಹಾನ ಅವರು ಇಬ್ಬರು ಗಂಡು ಮಕ್ಕಳು, ಪತ್ನಿ ಹಾಗೂ ಅಪಾರ ಬಂಧು ಬಳಗವನ್ನ ಅಗಲಿದ್ದಾರೆ.
ವೈ.ಯೋಹಾನ್ ಅವರು ವೃತ್ತಿಯಲ್ಲಿ ಟೇಲರಿಂಗ್ ಕೆಲಸ ಮಾಡುತ್ತಲೇ ಕೇಬಲ್ ವ್ಯವಹಾರಕ್ಕೆ ಇಳಿದಿದ್ದರು. ಅವರ ಕಾರ್ಯಕ್ಷಮತೆ ಎಷ್ಟಿತ್ತೆಂದರೆ ಕೆಲವೇ ವರ್ಷಗಳಲ್ಲಿ ವೈ.ಯೋಹಾನ್ ಅವರು ವಾಣಿಜ್ಯನಗರಿಯ ಕೇಬಲ್ ಕಿಂಗ್ ಎನಿಸಿಕೊಂಡಿದ್ದರು.
ನಗರದಲ್ಲಿ ಮೊದಲ ಬಾರಿಗೆ ಕೇಬಲ್‌ನಲ್ಲಿ ನ್ಯೂಸ್ ಆರಂಭಿಸಿದ್ದರು. ಸಧ್ಯ ಸುವರ್ಣ ಟಿವಿಯಲ್ಲಿ ಆ್ಯಂಕರ್ ಆಗಿರುವ ವೀಣಾ ಪೂಜಾರಿ ಇವರಲ್ಲಿ ಮೊದಲು ಕಾರ್ಯನಿರ್ವಹಿಸುತ್ತಿದ್ದರು.
ಹಿರಿಯ ಪತ್ರಕರ್ತ ನಾರಾಯಣ ವೈದ್ಯ, ಬಸವರಾಜ ಆನೇಗುಂದಿ, ರಾಜು ಮುದಗಲ್, ರವಿ ಸಂಗಳಕರ, ಮೆಹಬೂಬ ಮುನವಳ್ಳಿ, ಪೂರ್ಣಿಮಾ ದುಬೆ, ಪ್ರಲ್ಹಾದ ಗೌಡ, ಮಹದೇವ, ಮಂಜುನಾಥ ಹೆಬಸೂರ ಸೇರಿದಂತೆ ಹಲವರು ಇವರ ಸ್ಥಳೀಯ ಕೇಬಲ್ ನ್ಯೂಸ್‌ನಲ್ಲಿ ಕೆಲಸ ಮಾಡಿದ್ದರು.
ಕೇಬಲ್ ವ್ಯವಹಾರದಲ್ಲಿ ಬಹುದೊಡ್ಡ ಹೆಸರು ಮಾಡಿದ್ದ ಯೋಹಾನ್ ಅವರು ಕೇಬಲ್ ವ್ಯವಹಾರದಲ್ಲಿ ದಶಕಗಳ ಕಾಲ ಹೆಸರು ಮಾಡಿದ್ದರು. ಇಂತಹ ಉತ್ತಮ ವ್ಯಕ್ತಿಯೋರ್ವರು ಅಗಲಿದ್ದು, ನಗರಕ್ಕೆ ತುಂಬಲಾರದ ನಷ್ಟವಾಗಿದೆ.