“ಯೋಗಿ ಆದಿತ್ಯನಾಥ” ನಾಡಿನ ಕಳ್ಳರಿಗೆ “ಗುಂಡೇಟು” ಕೊಟ್ಟ ಗಂಡೆದೆ ಹುಬ್ಬಳ್ಳಿ ಪೊಲೀಸರು… Exclusive Details With Videos…

ಹುಬ್ಬಳ್ಳಿ: ದೇಶದ ಹಲವು ರಾಜ್ಯದಲ್ಲಿ ಕಳ್ಳತನ ಮಾಡುತ್ತಿದ್ದ ಉತ್ತರಪ್ರದೇಶ ಮೂಲದ ಮೂವರು ಆರೋಪಿಗಳ ಪೈಕಿ ಇಬ್ಬರಿಗೆ ಗುಂಡೇಟು ಕೊಟ್ಟು ಬಂಧಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ಸಂಭವಿಸಿದೆ.
ಇಡೀ ಪ್ರಕರಣದ ಮಹತ್ವದ ಮಾಹಿತಿಯನ್ನ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಹೇಳಿದ್ದು, ಇಲ್ಲಿದೆ ನೋಡಿ. ಉತ್ತರಪ್ರದೇಶದ ಆರೋಪಿಗಳು ಹೇಗೆ ಕಳ್ಳತನ ಮಾಡಲು ಪ್ಲಾನ್ ರೂಪಿಸುತ್ತಿದ್ದರು ನೋಡಿ…
ಗುಡಿಹಾಳ ರಸ್ತೆಯಲ್ಲಿ ತಪ್ಪಿಸಿಕೊಂಡು ಪರಾರಿಯಾಗಿದ್ದ ಆರೋಪಿ ಶಂಷಾದ ಎಂಬಾತ ಕಾರನ್ನ ಸುಟ್ಟು ಹಾಕಿದ್ದು, ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಹುಬ್ಬಳ್ಳಿ ಪೊಲೀಸರು ಆರೋಪಿಗಳನ್ನ ಹೆಡಮುರಿಗೆ ಕಟ್ಟಿದ್ದು, ಕಳ್ಳತನವಾಗಿರುವ ಹಣ ಮತ್ತು ಆಭರಣಗಳನ್ನ ವಶಕ್ಕೆ ಪಡೆಯಬೇಕಿದೆ.