ಧಾರವಾಡ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಯ ಉದ್ದೇಶಪೂರ್ವಕ ನಿರ್ಲಕ್ಷ್ಯತನ- ರಾಜ್ಯಮಟ್ಟದ ಯೋಗ ಒಲಂಪಿಯಾಡ್ ಡೇಟ್ ಫಿಕ್ಸ್ ಆಗಿದ್ದಕ್ಕೆ ಜಿಲ್ಲಾಮಟ್ಟದ ಆಯ್ಕೆಗೆ ದಿನ ಫಿಕ್ಸ್…
ಧಾರವಾಡ: ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆ ಒಂದಾದರೇ ಧಾರವಾಡ ಜಿಲ್ಲೆಯಲ್ಲಿ ಮತ್ತೊಂದು ಥರವಾಗಿರತ್ತೆ. ಇದಕ್ಕೆ ಧಾರವಾಡ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ ಎಂಬುದನ್ನ ತೋರಿಸತ್ತೆ. ಅದಕ್ಕೆ ಮತ್ತೊಂದು ತಾಜಾ ಉದಾಹರಣೆ ಇಲ್ಲಿದೆ ನೋಡಿ.
ಧಾರವಾಡ ಜಿಲ್ಲೆಯಲ್ಲಿ ಯೋಗ ಒಲಂಪಿಯಾಡ್ ಸ್ಪರ್ಧೆ ಆಯೋಜನೆ ಮಾಡಿ ಆಯ್ಕೆ ಪ್ರಕ್ರಿಯೆ ಮಾಡಬೇಕಿತ್ತು. ಆದರೆ, ಇಲ್ಲಿಯವರೆಗೆ ಈ ಪ್ರಕ್ರಿಯೆ ಮಾಡದೇ, ತಾವೇ ಸೃಷ್ಟಿಸಿ ಲಿಸ್ಟ್ ಮಾಡಿಟ್ಟುಕೊಂಡಿರುವುದು ಈಗ ಬಹಿರಂಗವಾಗಿದೆ.

ಈ ವಿಷಯ ಹೊರಗೆ ಬರತ್ತೆ ಎಂಬ ಕಾರಣಕ್ಕೆ 11.11.2025ಕ್ಕೆ ಮಂಡ್ಯದಲ್ಲಿ ರಾಜ್ಯಮಟ್ಟದ ಯೋಗ ಒಲಂಪಿಯಾಡ್ ಸ್ಪರ್ಧೆ ನಡೆಯಲಿದೆ. ಅದರ ಹಿಂದಿನ ಒಂದು ದಿನ ತರಾತುರಿಯಲ್ಲಿ ಜಿಲ್ಲಾಮಟ್ಟದ ಆಯ್ಕೆ ಪ್ರಕ್ರಿಯೆ ನಡೆಸಲು ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ವಿಷ್ಣು ಹೆಬ್ಬಾರ್ ಮುಂದಾಗಿರುವುದು ವಿದ್ಯಾರ್ಥಿಗಳನ್ನ ಮಾನಸಿಕವಾಗಿ ಕುಗ್ಗಿಸುವ ಯತ್ನವಾಗಿದೆ.
ಇಂದು ಸರಕಾರಿ ರಜೆ ಘೋಷಣೆ ಇದ್ದ ಸಮಯದಲ್ಲಿ ರವಿವಾರ ಆಯ್ಕೆ ಪ್ರಕ್ರಿಯೆ ಆದೇಶ ಮಾಡಲಾಗಿದೆ. ಹೀಗಾಗಿ ಧಾರವಾಡ ಶಿಕ್ಷಣ ಇಲಾಖೆಯ ಅವ್ಯವಸ್ಥೆ ಮತ್ತಷ್ಟು ಮುಂದುವರೆದಿದೆ.
