ಕರ್ತವ್ಯದಲ್ಲಿದ್ದಾಗಲೇ ರಸ್ತೆ ಅಪಘಾತದಲ್ಲಿ ಯೋಧನ ದುರ್ಮರಣ..!

ಸೇನೆಗೆ ಸೇರಿ ಹತ್ತು ವರ್ಷಗಳನ್ನ ಕಳೆದಿದ್ದ ಯೋಧ ಇತ್ತೀಚೆಗೆ ಮದುವೆ ಮಾಡಿಕೊಂಡಿದ್ದ..

ಮೈಸೂರು: ಹೈವೇ ಪೆಟ್ರೋಲಿಂಗ್ ಕರ್ತವ್ಯ ನಿರ್ವಹಣೆ ಮುಗಿಸಿ ರಸ್ತೆ ದಾಟುವಾಗ ಬೈಕ್ ಡಿಕ್ಕಿಯಾಗಿ ಮೈಸೂರು ಜಿಲ್ಲೆಯ ತಿ.ನರಸಿಪುರ ತಾಲೂಕಿನ ಮುಡುಕುತೊರೆ ಸಮೀಪದ ಬೆಟ್ಟಹಳ್ಳಿ ಗ್ರಾಮದ ನಿವಾಸಿಯಾಗಿದ್ದ ಯೋಧನೋರ್ವ ಅಸ್ಸಾಂನಲ್ಲಿ ಸಾವಿಗೀಡಾದ ಘಟನೆ ನಡೆದಿದೆ.
ಸಿಆರ್ ಫಿಎಫ್ ನಲ್ಲಿ ಯೋಧನಾಗಿದ್ದ ಮೋಹನ ಎಂಬುವವರೇ ಸಾವಿಗೀಡಾಗಿದ್ದಾರೆ. ಕಳೆದ ಹತ್ತು ವರ್ಷದ ಹಿಂದೆ ಬಡ ಕುಟುಂಬದ ಮೋಹನ, ಸೇನೆಯನ್ನ ಸೇರಿಕೊಂಡಿದ್ದರು. ಇತ್ತೀಚೆಗೆ ಮದುವೆಯನ್ನ ಮಾಡಿಕೊಂಡಿದ್ದರು.

ಬೈಕ್ ಡಿಕ್ಕಿಯಾದ ಪರಿಣಾಮ ತೀವ್ರ ರಕ್ತಸ್ರಾವವಾಗಿದ್ದು, ಆಸ್ಪತ್ರೆಗೆ ಸೇರಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಬಡ ತಂದೆ-ತಾಯಿಗಳನ್ನ ಸಾಕುವ ಜವಾಬ್ದಾರಿಯನ್ನ ಹೊಂದಿದ್ದ ಇನ್ನಿಲ್ಲವಾಗಿರುವುದು ಕುಟುಂಬವನ್ನ ಸಂಕಷ್ಟಕ್ಕೀಡು ಮಾಡಿದೆ.
ಮೃತದೇಹದ ನಿರೀಕ್ಷೆಯಲ್ಲಿ ಕುಟುಂಬದವರಿದ್ದು, ನಾಳೆಯವರೆಗೆ ಬರುವ ನಿರೀಕ್ಷೆಯಿದೆ. ಅಪಘಾತ ನಡೆದಿದ್ದರ ಬಗ್ಗೆ ಅಧಿಕೃತವಾದ ಮಾಹಿತಿಯನ್ನ ಕುಟುಂಬಕ್ಕೆ ಸೇನೆ ರವಾನಿಸಿದೆ.