ಏಳು ತಾಯಿಯ ಮಕ್ಕಳನ್ನ ಮುಟ್ಟದ ತಹಶೀಲ್ದಾರ…!

ಹುಬ್ಬಳ್ಳಿ: ತಾಲೂಕಿನ ಅದರಗುಂಚಿ ಗ್ರಾಮದ ಬಳಿಯಲ್ಲಿರುವ ಏಳು ಮಕ್ಕಳ ತಾಯಿಯ ಮರವನ್ನ ತೆಗೆಯಲು ಮುಂದಾಗಿದ್ದ ಜಿಲ್ಲಾಡಳಿತ ಕ್ರಮದ ವಿರುದ್ಧ ಸಾರ್ವಜನಿಕರು ಆಕ್ರೋಶವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ತೆರವುಗೊಳಿಸದೇ ಮರಳಿ ಹೋದ ಘಟನೆ ನಡೆದಿದೆ.

ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಅದರಗುಂಚಿ ಬಳಿಯಿರುವ ಏಳು ಮಕ್ಕಳ ತಾಯಿ ಗುಡಿಯನ್ನ ಹಾಗೂ ಮರವನ್ನ ತೆಗೆಯಲು ತಹಶೀಲ್ದಾರರು ಸಮೇತ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದರು. ಆದರೆ, ಇದನ್ನ ಯಾವುದೇ ಕಾರಣಕ್ಕೂ ತೆರವು ಮಾಡಲು ಬಿಡುವುದಿಲ್ಲವೆಂದು ಜನ ಹೋರಾಟಕ್ಕೀಳಿದರು.
ತಹಶೀಲ್ದಾರರು ಸೇರಿದಂತೆ ಹಲವರು ಜನರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನ ಮಾಡಿದರಾದರೂ, ಜನರು ತಮಗೆ ಈ ಸ್ಥಳದಿಂದ ನೆಮ್ಮದಿ ಸಿಗುತ್ತದೆ ಎಂದು ಹೇಳಿಕೊಂಡರು.
ಸುಮಾರು ಎರಡ್ಮೂರು ಗಂಟೆಗಳ ಕಾಲ ಪ್ರಯತ್ನಿಸಿದರೂ, ತೆರವಿಗೆ ಅನುಕೂಲ ಸಿಗದ ಹಿನ್ನೆಲೆಯಲ್ಲಿ ಅಧಿಕಾರಿಗಳು ಬಂದ ದಾರಿಗೆ ಸುಂಕವಿಲ್ಲವೆನ್ನುವಂತೆ ಮರಳಿದರು.