ನಂಜುಡೇಶ್ವರನಿಗೆ ಮಗಳ ಮುಡಿ ಕೊಟ್ಟ ಯಶ್: ಹೌದು ಮಾರಾಯ್ರೇ…!

ಮೈಸೂರು: ರಾಕಿಂಗ್ ಸ್ಟಾರ್ ಯಶ್ ನೀವು ತಿಳಿದುಕೊಂಡ ಹಾಗೇ ಕೆಜಿಎಫ್-2 ಸಿನೇಮಾದ ಶೂಟಿಂಗ್ ನಲ್ಲಿ ಬಿಜಿಯಿಲ್ಲ. ಬದಲಿಗೆ ಕುಟುಂಬ ಸಮೇತ ಮೈಸೂರಿನ ನಂಜುಡೇಶ್ವರನ ಸನ್ನಿಧಿಯಲ್ಲಿ ಮಗಳ ಮುಡಿ ಕೊಟ್ಟು ಹರಕೆ ತೀರಿಸುವಲ್ಲಿ ಬಿಜಿಯಾಗಿದ್ದಾರೆ.
ನಟ ಯಶ್ ಹಾಗೂ ರಾಧಿಕಾ ಪಂಡಿತ ಬೆಳ್ಳಂಬೆಳಿಗ್ಗೆ ದಕ್ಷಿಣದ ಕಾಶಿಯಂದೇ ಖ್ಯಾತಿ ಪಡೆದಿರುವ ನಂಜನಗೂಡಿನ ನಂಜುಡೇಶ್ವರನ ಸನ್ನಿಧಿಗೆ ಆಗಮಿಸಿ, ತಮ್ಮ ಮಗಳಾಸ ಐರಾಳ ಮುಡಿ ಒಪ್ಪಿಸುವ ಮೂಲಕ ತಮ್ಮ ಹರಕೆ ಸಲ್ಲಿಸಿದರು. ಇಬ್ಬರು ಸ್ಟಾರ್ ದಂಪತಿಗಳು ನಗರಕ್ಕೆ ಬರುವುದನ್ನ ಗೌಪ್ಯವಾಗಿಟ್ಟಿದ್ದರಿಂದ ಅಭಿಮಾನಿಗಳ ಗೌಜು ಗದ್ದಲವಿರದೇ ದೇವರ ಆಶೀರ್ವಾದ ಪಡೆದರು.