Posts Slider

Karnataka Voice

Latest Kannada News

ಮಾಹಿತಿ ಕೇಳಿದ್ದಕ್ಕೆ ಪಿಡಿಓ, ಸದಸ್ಯರಿಂದಲೇ ಹಲ್ಲೆ…!

1 min read
Spread the love

ಧಾರವಾಡ: ಗ್ರಾಮ ಪಂಚಾಯತಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಬಗ್ಗೆ ಮಾಹಿತಿ ಕೇಳಿದ್ದರಿಂದಲೇ ಆರ್ ಟಿಐ ಕಾರ್ಯಕರ್ತ ಹಾಗೂ ಕಲಾವಿದರಾಗಿರುವ ವ್ಯಕ್ತಿಯನ್ನ ಥಳಿಸಿರುವ ಘಟನೆಯೊಂದು ತಾಲೂಕಿನ ಯರಿಕೊಪ್ಪ ಗ್ರಾಮದಲ್ಲಿ ನಡೆದಿದೆ.

ಯರಿಕೊಪ್ಪ ಗ್ರಾಮ ಪಂಚಾಯತಿಯಲ್ಲಿ 50ರಿಂದ 60 ಲಕ್ಷ ರೂಪಾಯಿ ಹಣದ ವಂಚನೆಯಾಗಿದೆ ಎಂಬ ಸಂದೇಹದಿಂದ ಕಣವಿಹೊನ್ನಾಪುರ ಗ್ರಾಮದ ಮಲ್ಲಿಕಾರ್ಜುನ ರೊಟ್ಟಿಗವಾಡ ಎಂಬುವವರು ಮಾಹಿತಿಯನ್ನ ಕೇಳಿದ್ದರು. ಇದೀಗ ಅವರನ್ನೇ ಥಳಿಸಿಲಾಗಿದೆ ಎಂದು ಗ್ರಾಮೀಣ ಠಾಣೆಯಲ್ಲಿ ದೂರು ನೀಡಲಾಗಿದೆ.

ಗ್ರಾಮ ಪಂಚಾಯತಿಗೆ ಬಂದ ಅನುದಾನದಲ್ಲಿ ಕೆರೆ, ರಸ್ತೆ, ಆಟದ ಮೈದಾನ ನಿರ್ಮಾಣ ಮಾಡಲಾಗಿದೆ ಎಂದು ಸುಳ್ಳು ಹೇಳಿ ಲಕ್ಷಾಂತರ ರೂಪಾಯಿ ಅವ್ಯವಹಾರವಾಗಿದೆ ಎಂದ ಅರಿತ ಮಲ್ಲಿಕಾರ್ಜುನ ಮಾಹಿತಿಯನ್ನ ಕೇಳಿ ಹೋರಾಟಕ್ಕೀಳಿದಿದ್ದರು.

ಈ ಕಾರಣದಿಂದ ನುಗ್ಗಿಕೇರಿ ಬಳಿಯಲ್ಲಿ ಕಾರು ಅಡ್ಡಗಟ್ಟಿ ಪಂಚಾಯತಿ ಪಿಡಿಓ ಮತ್ತು ಕೆಲ ಸದಸ್ಯರು ಕೂಡಿಕೊಂಡು ಮಾರಣಾಂತಿಕ ಹಲ್ಲೆ ಮಾಡಿದ್ದಾರೆಂದು ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Leave a Reply

Your email address will not be published. Required fields are marked *

You may have missed