ಯಮನೂರ ಬೆಣ್ಣೆಹಳ್ಳದ ಬಳಿ ಅಪರಿಚಿತನ ಹೆಣ- ಕೊಲೆ…!?
1 min readನವಲಗುಂದ: ತಾಲೂಕಿನ ಯಮನೂರ ಬಳಿಯ ಬೆಣ್ಷೆಹಳ್ಳದ ಪಕ್ಕದಲ್ಲಿ ಅಪರಿಚಿತ ವ್ಯಕ್ತಿಯೋರ್ವನ ಶವ ದೊರಕಿದ್ದು, ಹಲವು ಅನುಮಾನಗಳನ್ನ ಮೂಡಿಸಿದೆ.
ಶವವಾಗಿರುವ ವ್ಯಕ್ತಿಯ ಅಂದಾಜು ವಯಸ್ಸು 45 ಆಗಿದ್ದು, ಘಟನಾ ಸ್ಥಳಕ್ಕೆ ನವಲಗುಂದ ಠಾಣೆಯ ಪೊಲೀಸರು ದೌಡಾಯಿಸಿದ್ದಾರೆ.
ಶವವಾಗಿರುವ ವ್ಯಕ್ತಿಯ ಬಗ್ಗೆ ಯಾವುದೇ ವಿವರ ದೊರಕಿಲ್ಲ. ಶವವನ್ನ ನವಲಗುಂದ ಸರಕಾರಿ ಆಸ್ಪತ್ರೆಗೆ ರವಾನೆ ಮಾಡಿ, ಮರಣೋತ್ತರ ಪರೀಕ್ಷೆ ನಡೆಸಲಿದ್ದಾರೆ.