Posts Slider

Karnataka Voice

Latest Kannada News

ಯಡಿಯೂರಪ್ಪನವರೇ ನೀವೂ ಸಿಎಂ ಹೌದಲ್ಲೋ, ಮತ್ತ್ ನಿರ್ಧಾರ ಹೇಳ್ರಲ್ಲಾ: ವಿ ಎಸ್ ಉಗ್ರಪ್ಪ

1 min read
Spread the love

ಬೆಂಗಳೂರು: ಅಧಿಕಾರಕ್ಕೆ ಬಂದ ಆರಂಭದಲ್ಲಿ 100 ದಿನದಲ್ಲಿ ಇಂಧನ ಹಾಗೂ ದಿನನಿತ್ಯದ ಬಳಕೆ ವಸ್ತುಗಳ ಬೆಲೆ ಇಳಿಕೆ ಮಾಡುವ ಭರವಸೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಈ ನಿಟ್ಟಿನಲ್ಲಿ ವಿಫಲರಾಗಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆರೋಪಿಸಿದ್ದಾರೆ.

ಬೆಂಗಳೂರಿನ ಕ್ಲೀನ್‌ ಸದಸ್ಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಉಗ್ರಪ್ಪ, ಅಂದು ಆಡಿದ ಮಾತನ್ನು ಇಂದು ಉಳಿಸಿಕೊಳ್ಳುವಲ್ಲಿ ಮೋದಿ ವಿಫಲರಾಗಿದ್ದಾರೆ. ಜಾಗತಿಕ ಮಾರುಕಟ್ಟೆಯಲ್ಲಿ ತೈಲಗಳ ಬೆಲೆ ಕಡಿಮೆ ಆಗಿದ್ದರೂ ಭಾರತದಲ್ಲಿ ಮಾತ್ರ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಆಗುತ್ತಿದೆ. ಶೇ 69 ರಷ್ಟು ತೆರಿಗೆಯನ್ನು ಪೆಟ್ರೋಲ್-ಡೀಸೆಲ್ ಮೇಲೆ ವಿಧಿಸುವ ಮೂಲಕ ವಿಶ್ವದಲ್ಲಿಯೇ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಅತಿ ಹೆಚ್ಚು ತೆರಿಗೆ ವಿಧಿಸುವ ರಾಷ್ಟ್ರವಾಗಿಸಿದ್ದಾರೆ. ಈಗೀನ ಕಚ್ಚಾತೈಲ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಡಿಮೆ ಇದೆ. ಈಗಿನ ದರಕ್ಕೆ ಹೋಲಿಸಿದರೆ ಪ್ರತಿ ಲೀಟರ್ ಪೆಟ್ರೋಲ್ ನ್ನು 18 ರೂಪಾಯಿಗೆ ನೀಡಬಹುದು. ಅವರಿಗೆ ದೇಶದ ಜನತೆ ಬಗ್ಗೆ ಕಾಳಜಿಯಿಲ್ಲ ಕೊರೋನಾ ಸಂದರ್ಭದಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಇಂಧನ ಬೆಲೆ ಹೆಚ್ಚಾಗುತ್ತಿದೆ. ತೆರಿಗೆ ಮೇಲೆ ತೆರಿಗೆ ಭಾರ ಹೊರಿಸಲಾಗುತ್ತಿದೆ. ಆದರೆ ಮಾತಿನ ಮೇಲೆ ತೆರಿಗೆ ಭಾರ ಹೊರಿಸಲಾಗುತ್ತಿದೆ, ಆದರೆ ಮಾತಿನ ಮೂಲಕ ಸ್ವರ್ಗವನ್ನೇ ಕೆಳಗಿಳಿಸಿದ ರೀತಿ ಮೋದಿ ಮಾತನಾಡುತ್ತಿದ್ದಾರೆ, ಪೆಟ್ರೋಲ್ ಡೀಸೆಲ್ ಬೆಲೆ ಕಡಿಮೆಯಾದರೆ ಇತರೆ ವಸ್ತುಗಳ ಬೆಲೆಯೂ ಕಡಿಮೆ ಆಗುತ್ತವೆ. ನರೇಂದ್ರ ಮೋದಿಗೆ ಬದ್ಧತೆ ಇದ್ದರೆ ಬೆಲೆ ಕಡಿಮೆ ಮಾಡಿ ಎಂದು ಸವಾಲು ಹಾಕಿದರು,.

ಡಿಕೆಶಿ ಪದಗ್ರಹಣ ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಮಾರ್ಚ್ 11ರಂದ ನೇಮಕಗೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಅಧಿಕಾರ ಹಸ್ತಾಂತರ ಕಾರ್ಯಕ್ರಮ ಇದುವರೆಗೆ ಆಗಿರಲಿ ಎರಡು ಸಾರಿ ಮುಂದೂಡಲಾದೆ. ನಂತರ ಇದೀಗ ಜೂನ್ 14 ನೇ ತಾರೀಖಿನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಕೊರೋನಾ ಹಿನ್ನೆಲೆಯಲ್ಲಿ ಕೇಂದ್ರದ ಮಾರ್ಗಸೂಚಿ ಇರುವ ಕಾರಣ ಸಮಾರಂಭವನ್ನು ನಡೆಸಿರಲಿಲ್ಲ. ಇದೀಗ ರಾಜ್ಯದ 6200 ಗ್ರಾಮ ಪಂಚಾಯಿತಿ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯ 8000 ಸ್ಥಳಗಳಲ್ಲಿ ಸಮಾರಂಭ ನಡೆಸಲು ತೀರ್ಮಾನಿಸಲಾಗಿದೆ. ತಂತ್ರಜ್ಞಾನವನ್ನು ಬಳಸಿಕೊಂಡು ವೀಡಿಯೋ ಮೂಲಕ ಕಾರ್ಯಕ್ರಮ ಮಾಡಲು ನಿರ್ಧಾರ ಮಾಡಿದ್ದಾರೆ. ಈ ಹಿಂದೆ ಎರಡು ಬಾರಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರಿಗೆ ಮನವಿ ಪತ್ರ ಬರೆದಿದ್ದೆವು. ಮಾರ್ಗಸೂಚಿ ಪ್ರಕಾರವೇ ಕಾರ್ಯಕ್ರಮ ನಡೆಸುತ್ತೇವೆ ಎಂದು ಕೇಳಿದ್ದೆವು. ಆದರೆ, ಅವರಿಂದ ಇದಕ್ಕೆ ಒಪ್ಪಿಗೆ ಸಿಕ್ಕಿರಲಿಲ್ಲ. ಈಗಲೂ ಮನವಿ ಮಾಡಿದ್ದಾರೆ. ಇದಕ್ಕೆ ಸಮ್ಮತಿ ಸಿಕ್ಕಿಲ್ಲ. ಆದರೆ, ಈ ಮಧ್ಯೆ ಚಿಕ್ಕಬಳ್ಳಾಪುರದಲ್ಲಿ ಸಚಿವ ಡಾ. ಕೆ.ಸುಧಾಕರ್ ಹಾಗೂ ಎಸ್.ಟಿ.ಸೋಮಶೇಖರ್ ಮಾತನಾಡಿ ಕೊರೋನಾ ಮುಗಿದ ನಂತರ ಕಾರ್ಯಕ್ರಮ ಮಾಡಿದರೆ ಆಗಲ್ವಾ ಎಂದು ಪ್ರಶ್ನಿಸಿದ್ದಾರೆ. ಸಮಾರಂಭ ನಡೆಸಲು ನಮಗೆ ಒಪ್ಪಿಗೆ ನೀಡುವುದು ಮುಖ್ಯಮಂತ್ರಿ- ಗೃಹ ಸಚಿವ ಅಥವಾ ಸಚಿವರುಗಳೋ ಅನ್ನೋ ಅನುಮಾನ ಬರುತ್ತಿದೆ. ಈಗಾಗಲೇ ಈ ಸಮಾರಂಭ ನಡೆಯುವುದಕ್ಕೆ ಅನುಮತಿ ನಿರಾಕರಿಸುವಂತೆ ಬಿಜೆಪಿಯಲ್ಲಿ ಕೆಲ ನಾಯಕರು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಮಾಹಿತಿ ನನಗೆ ಲಭಿಸಿದೆ ಎಂದರು.

ನೀವೇನೇ ಪ್ರಯತ್ನ ಮಾಡಿದರು ಈ ರಾಜ್ಯದ ಜನ ಬುದ್ದಿವಂತರಿದ್ದಾರೆ. ಬಿಹಾರ, ಪಶ್ಚಿಮ ಬಂಗಾಳದಲ್ಲಿ ಕಾರ್ಯಕ್ರಮ ಮಾಡಲು ಅನುಮತಿ ನೀಡಲಾಗಿದೆ. ಆದರೆ ರಾಜ್ಯದಲ್ಲಿ ಯಾಕೆ ಅನುಮತಿ ನಿರಾಕರಿಸಲಾಗುತ್ತಿದೆ. ಇದರ ಹಿಂದೆ ರಾಜಕೀಯ ಷಡ್ಯಂತ್ರ ಎದ್ದುಕಾಣುತ್ತಿದೆ. ರಾಜಕೀಯ ನಿಂತ ನೀರಲ್ಲ ಅಧಿಕಾರ ಇವತ್ತು ಇರುತ್ತೆ ನಾಳೆ ಹೋಗುತ್ತೆ. ನೀವು ಕೂಡಲೇ ಕಾರ್ಯಕ್ರಮಕ್ಕೆ ಅನುಮತಿ ನೀಡಿ ಎಂದು ಸಿಎಂಗೆ ಮನವಿ ಮಾಡಿದ ಉಗ್ರಪ್ಪ, ಯಡಿಯೂರಪ್ಪನವರೇ ನೀವು ಸಿಎಮ್ಮಾ ಅಥವಾ ಬೇರೆಯವರಾ ಎಂದು ಕುಹಕವಾಡಿದ್ದಾರೆ.

ಮಾರ್ಚ್ 8 ರಂದು ರಾಜ್ಯದಲ್ಲಿ ಕೇವಲ ಒಂದು ಪ್ರಕರಣ ಇತ್ತು. ಈಗ ಅದು 5000 ಗಡಿ ದಾಟಿದೆ. ಇಂದು ದೇಶದಲ್ಲಿ ಪ್ರಕರಣಗಳು 2.68 ಲಕ್ಷದ ಗಡಿ ದಾಟಿದೆ. ದೇಶದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಲು ನರೇಂದ್ರ ಮೋದಿ ಮತ್ತು ರಾಜ್ಯದಲ್ಲಿ ಯಡಿಯೂರಪ್ಪ ಅವರ ನಿರ್ಲಕ್ಷವೇ ಕಾರಣ. ಹೀಗಾಗಿ ಎಲ್ಲರೂ ಕೊರೋನಾ ಜೊತೆ ಬದುಕುವ ಕಾಲ ಬಂದಿದೆ ಎಂದು ಉಗ್ರಪ್ಪ ಬೇಸರ ವ್ಯಕ್ತಪಡಿಸಿದರು.


Spread the love

Leave a Reply

Your email address will not be published. Required fields are marked *