ಯಡಿಯೂರಪ್ಪ ಸಮ್ಮುಖದಲ್ಲೇ ಸಿದ್ಧುಗೆ ಹೌದೋ ಹುಲಿಯಾ : ಬರ್ತಡೇ ದಿನಾ ಬಿಗ್ ಶಾಕ್

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ 78ನೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಭಾಷಣ ಮಾಡಲು ಆರಂಭಿಸುತ್ತಿದಂತೆ ಅಭಿಮಾನಿಯೋರ್ವ ಹೌದೋ ಹುಲಿಯಾ ಎಂದು ಎಲ್ಲರನ್ನೂ ನಗೆಗಡಲ್ಲಲ್ಲಿ ತೇಲಿಸಿದ ಪ್ರಸಂಗ ನಡೆಯಿತು.
ಅರಮೆನ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ಧರಾಮಯ್ಯ, ನಾನು ಯಡಿಯೂರಪ್ಪ ಕೂಡಿಯೇ ರಾಜಕಾರಣಕ್ಕೆ ಬಂದವರು. ನನಗಿಂತ ನಾಲ್ಕು ವರ್ಷ ಯಡಿಯೂರಪ್ಪ ದೊಡ್ಡವರು, ಹೀಗಾಗಿಯೇ ನನಗಿಂತ ಮೊದಲು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರು ಎಂದು ನಗೆ ಚಟಾಕಿ ಹಾರಿಸಿದರು ಸಿದ್ಧರಾಮಯ್ಯ.