ತವರೂರಿಗೆ ಬಂದವರಿಗೆ ನೆಲೆಯಿಲ್ಲದೇ ಪರದಾಟ: ಅನ್ನ-ನೀರಿಗಾಗಿ ಕಾರ್ಮಿಕರ ಅಳಲು
1 min readಬೆಳಗಾವಿ: ಕರಾಡ್‌ದ ಸಕ್ಕರೆ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೂವತ್ತಕ್ಕೂ ಹೆಚ್ಚು ಕಾರ್ಮಿಕರು ತವರೂರಿಗೆ ಬಂದರೂ ಅವರಿಗೆ ತಮ್ಮ ಮನೆಗೆ ಹೋಗದ ಸ್ಥಿತಿ ನಿರ್ಮಾಣವಾಗಿದ್ದು, ಜಿಲ್ಲಾಡಳಿತ ಎಲ್ಲರನ್ನೂ ಕ್ವಾರಂಟೈನ್ ಮಾಡಿದ್ದು, ಕೊನೆಪಕ್ಷ ಊಟದ ವ್ಯವಸ್ಥೆಯನ್ನ ಮಾಡದೇ ಇರುವುದು ಕಾರ್ಮಿಕರಲ್ಲಿ ಆಕ್ರೋಶ ಮೂಡಿಸಿದೆ.
ಮೂರು ದಿನದಿಂದ ಅನ್ನ-ನೀರಿಗಾಗಿ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದ್ದು, ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿ ಸಮೀಪದ ಕರಬಟನಾಳ ಗ್ರಾಮದಲ್ಲಿ ಇಂತಹ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮದ ಹೊರಗಡೆಯ ಶಾಲೆಯಲ್ಲಿ ಕ್ವಾರಂಟೈನ್ ಮಾಡಿ, ಅನ್ನ-ನೀರು ಕೊಡದೇ ತೊಂದರೆಯಾಗಿದ್ದು, ಮಕ್ಕಳು-ಮಹಿಳೆಯರು ನೀರಿಗಾಗಿ ಪರದಾಟ ನಡೆಸುತ್ತಿದ್ದಾರೆ. ಜಿಲ್ಲಾಡಳಿತ-ಗ್ರಾಮ ಪಂಚಾಯತಿ ಪಿಡಿಓ ವಿರುದ್ಧ ಕಾರ್ಮಿಕರ ಆಕ್ರೋಶವ್ಯಕ್ತಪಡಿಸಿದ್ದಾರೆ