IPS ಶಶಿಕುಮಾರ್ ಸರ್ವೀಸ್‌ನಲ್ಲೇ ನೋಡದ ಪ್ರಕರಣವನ್ನ ಪತ್ತೆ ಹಚ್ಚಿದ “ಎಸಿಪಿ ಪಡೆ”…

ಕೇಂದ್ರ ಸರ್ಕಾರದ ರೇಲ್ವೆ ನೌಕರಿ ಇದ್ದರೂ ಐಷಾರಾಮಿ ಜೀವನ ನಡೆಸಲು ಕಳ್ಳತನದ ದಾರಿ
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡದ ಹಲವೆಡೆ ಖತರ್ನಾಕ್ ಕಳ್ಳರ ಕೈ ಚಳಕದಲ್ಲಿ ಮಹಿಳೆಯರೇ ಮಾಸ್ಟರ್ ಮೈಂಡ್ ಆಗಿದ್ದು, ಜನನಿಬೀಡ ಪ್ರದೇಶದಲ್ಲಿ ನಕಲಿ ಚಾವಿ ಬಳಸಿ ಬೈಕ್ ಎಗರಿಸುತ್ತಿದ್ದ ಹೆಂಗಸರ ಸಮೇತ ಇಡೀ ಪಟಾಲಂ ಸೆರೆ ಹಿಡಿಯುವಲ್ಲಿ ವಿದ್ಯಾನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಎಕ್ಸಕ್ಲೂಸಿವ್ ವೀಡಿಯೋ…
ಹೆಂಗಸರ ಈ ಕಳ್ಳತನದ ಕೃತ್ಯಕ್ಕೆ ಪೊಲೀಸರೇ ದಂಗಾಗಿದ್ದಾರೆ. ಅವಳಿನಗರ ಖತರ್ನಾಕ್ ಕಳ್ಳರ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಹು-ಧಾ ಕಮೀಷನರ್ ಎನ್.ಶಶಿಕುಮಾರ್, ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನಗಳ ಕಳ್ಳತನವಾಗಿದ್ದವು. ಎಸಿಪಿ ನೇತೃತ್ವದಲ್ಲಿ ತಂಡ ಸಹ ರಚನೆ ಮಾಡಲಾಗಿತ್ತು. 12 ದ್ವಿಚಕ್ರ ವಾಹನಗಳನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದೆ. ಅದರಲ್ಲಿ 7 ಪ್ರಕರಣ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದವು.
ಕೇಶ್ವಾಪುರದಲ್ಲಿ 3, ಹುಬ್ಬಳ್ಳಿ ಉಪನಗರದಲ್ಲಿ 1 ಹಾಗೂ ಧಾರವಾಡ ಶಹರದಲ್ಲಿ 1 ಪ್ರಕರಣ ದಾಖಲಾಗಿದ್ದವು.
ಆರೋಪಿಗಳು ಹುಬ್ಬಳ್ಳಿ ಮೂಲದ ನಿವಾಸಿಗಳು
ಹೆಣ್ಣುಮಕ್ಕಳು ಈ ಕಳ್ಳತನದಲ್ಲಿ ಭಾಗಿ ಆಗಿರೋದು ಅಚ್ಚರಿ ಮೂಡಿಸಿದೆ. ಕಿಮ್ಸ್,, ಕೇಶ್ವಾಪುರ ಸೇರಿ ಜನದಟ್ಟಣೆ ಇರುವ ಕಡೆಗಳಲ್ಲಿ ಕಳ್ಳತನ ಮಾಡ್ತಿದ್ರು. ನಕಲಿ ಚಾವಿಗಳನ್ನು ಬಳಸಿ ಕಳ್ಳತನ ಮಾಡ್ತಿದ್ರು. ನಂತರ ಸಾರ್ವಜನಿಕರಿಗೆ ಅರ್ಜೆಂಟ್ ಮಾರಾಟ ಮಾಡುವುದಿದೆ ಅಂತ ಮಾರಾಟ ಮಾಡ್ತಿದ್ರು.
15-20 ಸಾವಿರಗಳಿಗೆ ಮಾರಾಟ ಮಾಡ್ತಿದ್ರು. ಮೊದಲಿಗೆ 5ರಿಂದ 10 ಸಾವಿರ ತೆಗೆದುಕೊಳ್ಳುತ್ತಿದ್ರು, ದಾಖಲೆಗಳನ್ನು ತಂದು ಕೊಟ್ಟ ನಂತರ ಉಳಿದ ಮೊತ್ತ ನೀಡುವಂತೆ ಹೇಳ್ತಿದ್ರು. ರೇಷ್ಮಾ ಮತ್ತು ರವಿ ನಡುವೆ ತುಂಬಾ ಒಡನಾಟವಿತ್ತು. ಪ್ರಮುಖವಾಗಿ ಇವರೇ ಕಳ್ಳತನದ ರೂವಾರಿಗಳಾಗಿದ್ರು. ಆಸ್ಮಾ ಭಾನು, ಮುಬಾರಕ್, ದಸ್ತಗಿರ್ ಇವರು ಬೈಕ್ ಮಾರಾಟ ಮಾಡ್ತಿದ್ರು.
ಬೈಕ್ ಕದ್ದ ಕೂಡಲೇ ನಂಬರ್ ಪ್ಲೇಟ್ ಬದಲಾಯಿಸ್ತೀದ್ರು.
ಬೈಕ್ ಅನ್ನು ಸಂಪೂರ್ಣ ಬದಲಾಯಿಸ್ತಾ ಇದ್ರು.
ಮುಬಾರಕ್ ಮೇಲೆ ಸವಣೂರ ಪೊಲೀಸ್ ಠಾಣೆಯಲ್ಲಿ 2023ರಲ್ಲಿ ಪ್ರಕರಣ ದಾಖಲಾಗಿತ್ತು. ಉಳಿದವರ ಮೇಲೆ ಪ್ರಕರಣ ಇರೋದು ಕಂಡು ಬಂದಿಲ್ಲ. ಇನ್ನು ಹೆಚ್ಚಿನ ತನಿಖೆ ಮಾಡಬೇಕಿದೆ. ಆಸ್ಮಾ ಭಾನು, ಮುಬಾರಕ್ ಇಬ್ಬರು ರೈಲ್ವೆ ನೌಕರರಾಗಿದ್ದಾರೆ. ಐಷಾರಾಮಿ ಜೀವನಕ್ಕಾಗಿ ಕಳ್ಳತನ ಮಾಡ್ತಿರೋದು ಮೇಲ್ನೋಟಕ್ಕೆ ಕಂಡು ಬಂದಿದೆ. ಹೆಣ್ಣುಮಕ್ಕಳು ಇಂತಹ ಕೆಲಸದಲ್ಲಿ ಭಾಗಿಯಾಗಿರೋದು ನಾವು ನೋಡಿಲ್ಲ ಎಂದರು.
2023-24 ರಲ್ಲಿ ನಡೆದ ಪ್ರಕರಣಗಳು ಗೊತ್ತಾಗಿದೆ
ಎಲ್ಲರೂ ಸೇರಿ ಮಾಡಿರುವ ಪ್ರಕರಣ ಇದು
ಹೊರ ಜಿಲ್ಲೆಗಳ ನಂಬರ್ ಪ್ಲೇಟ್ ಅಳವಡಿಸಿ ಮೋಸ ಮಾಡ್ತಿದ್ರು ಎಂದ ಶಶಿಕುಮಾರ್