Posts Slider

Karnataka Voice

Latest Kannada News

ಮಹಿಳಾ ದಿನಾಚರಣೆಯಂದ್ರೇ, ಪ್ಯಾಷನ್ ಶೋ-ಪಾರ್ಟಿ ಮಾಡುವುದಲ್ಲ: ಮಹೇಶ ಪತ್ತಾರ

1 min read
Spread the love

ಎಪಿಎಂಸಿಯಲ್ಲಿ ಮಹಿಳಾ ದಿನಾಚರಣೆ-ಹಿರಿಯ ಮಹಿಳಾ ಕಾರ್ಮಿಕರಿಗೆ ಸನ್ಮಾನ

ಹುಬ್ಬಳ್ಳಿ: ನಾಳೆಯ ನೆಮ್ಮದಿಗಾಗಿ ಮಹಿಳೆಯರನ್ನು ತಾರತಮ್ಯ, ಹಿಂಸೆ, ಅತ್ಯಾಚಾರ, ದೌರ್ಜನ್ಯದಿಂದ ಮುಕ್ತಗೊಳಿಸಿ ಎಲ್ಲ ಹಂತದಲ್ಲಿ ಸಮಾನ ಅವಕಾಶಗಳನ್ನು ಒದಗಿಸುವದನ್ನು ಆಳುವ ಪ್ರಭುತ್ವಗಳು ಮತ್ತು ಸಮಾಜ ಖಾತ್ರಿಪಡಿಸುವುದು ಅಗತ್ಯವಾಗಿದೆ. ಇದು ಮಹಿಳೆಯರು ಪ್ಯಾಶನ್ ಶೋ, ಪಾರ್ಟಿ ಮಾಡುವ ಆಚರಣೆ ಅಲ್ಲ. ಮಹಿಳಾ ದಿನಾಚರಣೆಯ ಹಿಂದೆ ಮಹಿಳೆಯರ ಹಕ್ಕುಗಳಿಗಾಗಿ ನಡೆದ ಹೋರಾಟದ ಶತಮಾನಗಳ ಇತಿಹಾಸವಿದೆ. ಇದು ಜಾಗತಿಕ ದುಡಿಯುವ ಮಹಿಳೆಯರ ದಿನಾಚರಣೆಯಾಗಿದೆ ಎಂದು ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ ಹೇಳಿದರು.

ಇಂದು ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್ ಹುಬ್ಬಳ್ಳಿ ಮಹಿಳಾ ವಿಭಾಗ ಎಪಿಎಂಸಿ ಯಲ್ಲಿ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಹಿರಿಯ ಮಹಿಳಾ ಕಾರ್ಮಿಕರಾದ ಗಂಗಮ್ನ ವಗರನಾಳ, ಬಾಳಮ್ನ ಬಳ್ಳಾರಿ, ಖಾಜಾಬಿ ಕಲಾಲ ಅವರನ್ನು ಸನ್ಮಾನಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಮಹದಾಯಿ ಹೋರಾಟಗಾರ ಅಮೃತ ಇಜಾರಿ, ಮುಖಂಡರಾದ ಗುರುಸಿದ್ದಪ್ಪ ಅಂಬಿಗೇರ, ಬಸಮ್ಮ ಸೋಲಾಪುರ, ಮಂಜುನಾಥ ಹುಜಾರಾತಿ, ದುರ್ಗಪ್ಪ ಚಿಕ್ಕತುಂಬಳ, ಕರಿಯಪ್ಪ ಗಿರಿಸಾಗರ ಪಾಂಡು ಜಾಲಗಾರ ಮುಂತಾದವರು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *