ಹುಬ್ಬಳ್ಳಿಯಲ್ಲಿ ಮಹಿಳೆಯರ “ಅವುಗಳನ್ನ” ಕದಿಯುತ್ತಿದ್ದ ಸೈಕೋ ಅರೆಸ್ಟ್…. Exclusive
Exclusive
ಮಹಿಳೆಯರ ಒಳ ಉಡುಪುಗಳನ್ನು ಕಳ್ಳತನ ಮಾಡುತ್ತಿದ್ದ ಸೈಕೋ ಕಳ್ಳ ಲಾಕ್
ಹುಬ್ಬಳ್ಳಿ: ಮಧ್ಯರಾತ್ರಿ ಮನೆಗೆ ನುಗ್ಗಿ ಹಣ ಹಾಗೂ ಮಹಿಳೆಯರ ಒಳ ಉಡುಪುಗಳನ್ನು ಕಳ್ಳತನ ಮಾಡುತ್ತಿದ್ದ ಸೈಕೋನನ್ನು ಸಾರ್ವಜನಿಕರು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸ್ ಠಾಣೆಗೆ ಒಪ್ಪಿಸಿದ ಘಟನೆ ಹುಬ್ಬಳ್ಳಿಯಲ್ಲಿ ಗುರುವಾರ ರಾತ್ರಿ ನಡೆದಿದೆ.
ಎಕ್ಸಕ್ಲೂಸಿವ್ ವೀಡಿಯೋ….
ನೇಕಾರ ನಗರದಲ್ಲಿ ಕಳೆದ ಹಲವು ದಿನಗಳಿಂದ ಮನೆಯ ಹೊರಗಡೆ ರಾತ್ರಿ ಸಮಯದಲ್ಲಿ ಹೆಣ್ಣು ಮಕ್ಕಳು ಹಾಕಿದ ಒಳ ಉಡುಪುಗಳು ಕಳ್ಳತನ ಆಗುತ್ತಿದ್ದವು. ಅದೇ ರೀತಿ ಕೆಲವು ಮನೆಗಳಲ್ಲಿ ಹಣ ಕೂಡಾ ಕಳ್ಳತನ ಆಗುತ್ತಿತ್ತು. ಈ ನಿಟ್ಟಿನಲ್ಲಿ ಕೆಲವು ಸಾರ್ವಜನಿಕರು ತಮ್ಮ ತಮ್ಮ ಮನೆಗಳಿಗೆ ಸಿಸಿ ಕ್ಯಾಮರಾ ಅಳವಡಿಸಿದ್ದರು.
ಗುರುವಾರ ಮಧ್ಯರಾತ್ರಿ ಈ ಸೈಕೋ ಕಳ್ಳ ಮನೆಯೊಂದಕ್ಕೆ ಮನೆಯ ಮುಂದಿನ ಗೇಟ್ ಹಾರಿ ಬಂದು ಮಹಿಳೆಯರು ಹಾಕಿದ್ದ ಒಳ ಉಡುಪುಗಳನ್ನು ಕಳ್ಳತನ ಮಾಡಲು ಯತ್ನಿಸಿದ್ದ. ಆಗ ಮನೆಯವರು ಸಿಸಿ ಕ್ಯಾಮರಾದಲ್ಲಿ ಈ ದೃಶ್ಯವನ್ನು ನೋಡಿ ಏರಿಯಾ ನಿವಾಸಿಗಳಿಗೆ ಕಳ್ಳ ಬಂದಿರೋ ಮಾಹಿತಿಯನ್ನು ನೀಡಿ ಎಲ್ಲರೂ ಸೇರಿ ಹಿಡಿದು ಥಳಿಸಿದ್ದಾರೆ.
ನಂತರ ಆತನನ್ನು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ. ಸದ್ಯ ಮಹಿಳೆಯರ ಒಳ ಉಡುಪುಗಳನ್ನು ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಪೊಲೀಸರ ಕೈಗೆ ಒಪ್ಪಿಸಿದ ಹಿನ್ನೆಲೆ ನೇಕಾರ ನೇಕಾರದ ಸುತ್ತಮುತ್ತಲಿನ ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದು. ಹಳೇ ಹುಬ್ಬಳ್ಳಿ ಪೊಲೀಸರು ಈತನನ್ನು ವಶಕ್ಕೇ ಪಡೆದು ಈತನ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ.