ಗಾಂಜಾ ಗಿರಾಕಿ “ಗಬ್ಬಾನ” ಆತಿಥ್ಯ ಸ್ವೀಕರಿಸಿದ್ದ “ಮಹಿಳಾ ಅಧಿಕಾರಿ”- ಕುಟುಂಬದವರಿಗೂ ಫ್ರೀ ಸಫಾರಿ…!
1 min readಧಾರವಾಡ: ತನ್ನ ಕೆಲಸವಿಲ್ಲದಿರುವ ಪತಿಯನ್ನ ತನ್ನ ಕಚೇರಿಯಲ್ಲಿ ಕೂಡಿಸಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಮಹಿಳಾ ಅಧಿಕಾರಿಯ ಹಲವು ಮಾಹಿತಿಗಳು ಕರ್ನಾಟಕವಾಯ್ಸ್.ಕಾಂ ಗೆ ಲಭಿಸುತ್ತಿವೆ.
ಪತಿಯನ್ನ ಕಚೇರಿಯಲ್ಲಿ ಕೂಡಿಸಿ, ಅಧಿಕಾರಿಯಂತೆ ಪೋಸ್ ಕೊಡಿಸುತ್ತಿದ್ದ ಆಸಾಮಿಯನ್ನ ಕಚೇರಿಗೆ ಬರದಂತೆ ನೋಡಿಕೊಳ್ಳಲು ಹೇಳಿರುವ ದಕ್ಷ (?) ಮಹಿಳಾ ಅಧಿಕಾರಿ ಈ ಹಿಂದಿನಿಂದಲೂ ಧೋ ನಂಬರ ದಂಧೆ ನಡೆಸಿಕೊಂಡು ಬಂದಿರುವ ಗಿರಾಕಿಯನ್ನೇ ತನ್ನ ಫ್ರೀ ಸರ್ವಿಸ್ ಗೆ ಬಳಕೆ ಮಾಡಿಕೊಂಡಿರುವುದು ಗೊತ್ತಾಗಿದೆ.
ಕೆಲವು ದಿನಗಳ ಸೋಷಿಯಲ್ ಮೀಡಿಯಾದಲ್ಲಿನ ದಕ್ಷ ಮಹಿಳಾ ಅಧಿಕಾರಿ ತನ್ನ ಕುಟುಂಬದ ಸಮೇತ, ಧಾರವಾಡದಲ್ಲಿನ ಗಾಂಜಾ ಕುಳದ ರೆಸಾರ್ಟ್ ನಲ್ಲಿ ಆರಾಮ್ ತೆಗೆದುಕೊಂಡಿರುವುದು ಗೊತ್ತಾಗಿದೆ. ಅಷ್ಟೇ ಅಲ್ಲ, ಸಪಾರಿ ಸೇರಿದಂತೆ ಮೂರೊತ್ತು ಊಟವನ್ನೂ ಫ್ರೀಯಾಗಿ ಪಡೆದುಕೊಂಡು ಧನ್ಯರಾಗಿದ್ದಾರಂತೆ.
ಇಂತಹ ಮಹಿಳಾ ಅಧಿಕಾರಿಯನ್ನ ಇಲಾಖೆಯಲ್ಲಿನ ಹಿರಿಯರೊಬ್ಬರು ಕರೆದು ಹಿಂಡಿ ಹಿಪ್ಪೆ ಮಾಡಿದ್ದು, ಪತಿ ಮಹಾಶಯನನ್ನ ಕಚೇರಿಗೆ ಬರದಂತೆ ದಕ್ಷ(?) ಮಹಿಳಾ ಅಧಿಕಾರಿ ಮುಂದಾಗಿದ್ದಾರೆ. ಅಷ್ಟೇ ಅಲ್ಲ, ಒಂದು ತಿಂಗಳು ಹೊರಗೆ ರೂಮ್ ಮಾಡಿಕೊಂಡೀರಿ ಎಂದು ಸಲಹೆ ಕೂಡಾ ನೀಡಿದ್ದಾರಂತೆ… ಭಗವಂತಾ ಏನು ನಿನ್ನ “ಸಂಧಿ”ವಾತ…