“ಹಿಂದೂ ಮಹಿಳೆ”ಯ ಹತ್ಯೆ ತಪ್ಪಿಸಿದ ಕಲಘಟಗಿಯ “ರುಸ್ತುಂ ಅಲಿ”…

ಮಗಳಿಗೆ ಔಷಧ ತರಲು ಹೊರಟಾಗ
ವಿಧವೆ ಮೇಲೆ ಹತ್ಯೆ ಯತ್ನ
ಮಹಿಳೆ ಜೀವ ಉಳಿಸಿದ ಸಾಹಸಿ
ಧಾರವಾಡ: ತನ್ನ ಮಗಳಿಗಾಗಿ ಔಷಧ ತರಲು ಹೊರಟಿದ್ದ ವ್ಯಕ್ತಿಯೋರ್ವನ ಮುಂದೆ ಮಹಿಳೆಯ ಕೊಲೆ ಯತ್ನ ನಡೆಯುತ್ತಿದ್ದಾಗ, ಭಯಗೊಳ್ಳದೇ ನಡುವೆ ಹೋಗಿ ಆಕೆಯನ್ನ ರಕ್ಷಣೆ ಮಾಡಿ ಸಾಹಸ ಮೆರೆದ ಘಟನೆ ಕಲಘಟಗಿ ಪಟ್ಟಣದಲ್ಲಿ ನಡೆದಿದೆ.
ಇಡೀ ಘಟನೆಯ ಸಂಪೂರ್ಣ ವಿವರದ ವೀಡಿಯೋ… ಪೂರ್ಣ ನೋಡಿ..
ಕಲಘಟಗಿಯ ದಕ್ಷ ಪೊಲೀಸ್ ಇನ್ಸಪೆಕ್ಟರ್ ಶ್ರೀಶೈಲ ಕೌಜಲಗಿಯವರ ರುಸ್ತುಂ ಅಲಿಯ ಸಾಹಸವನ್ನ ಕೊಂಡಾಡಿದ್ದಲ್ಲದೇ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ವಿಷಯ ತಲುಪಿಸಿದ್ದಾರೆ. ಇದರಿಂದ ಎಸ್ಪಿಯವರು ಕೂಡಾ ರುಸ್ತುಂ ಅಲಿಯ ಕಾರ್ಯವನ್ನ ಮೆಚ್ಚಿ ಪ್ರಶಂಸೆವ್ಯಕ್ತಪಡಿಸಿದ್ದಾರೆ.
ಘಟನೆಯಲ್ಲಿ ಸವಿತಾ ಎಂಬ ಮಹಿಳೆಯ ತೀವ್ರವಾಗಿ ಗಾಯಗೊಂಡರೂ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ರುಸ್ತುಂ ಅಲಿಗೂ ಹದಿನೆಂಟು ಹೊಲಿಗೆಗಳು ಕೈಗೆ ಬಿದ್ದಿದ್ದು, ಉಪಚಾರ ಮಾಡಿಸಿಕೊಂಡಿದ್ದಾನೆ.