ಮಾಳಮಡ್ಡಿಯಲ್ಲಿ ಬಾವಿಗೆ ಬಿದ್ದಳಾಕೆ…!

ಧಾರವಾಡ: ನಗರದ ಮಾಳಮಡ್ಡಿಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ವೃದ್ಧೆಯೋರ್ವರು ಬಾವಿಯಲ್ಲಿ ಬಿದ್ದಿದ್ದು, ಸ್ಥಳೀಯರು ಆಕೆಯನ್ನ ಮೇಲಕ್ಕೇತ್ತಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ ಘಟನೆ ನಡೆದಿದೆ.
ಮಾಳಮಡ್ಡಿಯ ಬಾವಿಯಲ್ಲಿ ಬಿದ್ದ ತಕ್ಷಣವೇ ಜೋರಾಗಿ ಶಬ್ದವಾಗಿದ್ದು, ಬಾವಿಯಲ್ಲಿ ಬಿದ್ದ ವೃದ್ಧೆಯ ಕೈಗಳು ಮೇಲಕ್ಕೆ ಕಾಣುತ್ತಿದ್ದವು. ತಕ್ಷಣವೇ ಈಜು ಬರುತ್ತಿದ್ದ ಸ್ಥಳೀಯರು ಬಾವಿಯೊಳಗೆ ಜಿಗಿದು ಆಕೆಯನ್ನ ರಕ್ಷಣೆ ಮಾಡಿದ್ದಾರೆ.
ಅದೇ ಸಮಯದಲ್ಲಿ ಕೆಲವರು ಅಂಬ್ಯಲೆನ್ಸಗೆ ದೂರವಾಣಿ ಕರೆ ಮಾಡಿದ್ದರಿಂದ ಸರಿಯಾದ ಸಮಯಕ್ಕೆ 108 ಅಂಬ್ಯಲೆನ್ಸ್ ಬಂದು ಧಾರವಾಡದ ಜಿ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.
ಘಟನೆಯ ಬಗ್ಗೆ ಮಾಹಿತಿಯನ್ನ ಪೊಲೀಸರು ಕಲೆ ಹಾಕುತ್ತಿದ್ದು, ಬಾವಿಯೊಳಗೆ ವೃದ್ದೆ ಯಾವ ಕಾರಣಕ್ಕೆ ಬಿದ್ದರೆನ್ನುವುದರ ಬಗ್ಗೆ ವಿವರಣೆ ಸ್ಥಳೀಯರಿಂದ ಪಡೆಯುತ್ತಿದ್ದಾರೆ.
ವೃದ್ಧೆಯನ್ನ ವನಮಾಲಾ ಕುಲಕರ್ಣಿ ಎಂದು ಗುರುತಿಸಲಾಗಿದೆ.