ರಾಜ್ಯದ ಏಕೈಕ ಮಹಿಳಾ ಯೂನಿವರ್ಸಿಟಿಗೆ ಕೊರೋನಾ ಗಂಡಾಂತರ
ವಿಜಯಪುರ: ಅಕ್ಕಮಹಾದೇವಿ ವಿಶ್ವವಿದ್ಯಾಲಯಕ್ಕೆ ಕೊರೋನಾ ಶಾಕ್ ಎದುರಾಗಿದ್ದು, ಕೊರೋನಾ ಹೆಮ್ಮಾರಿ ಅಟ್ಯಾಕ್ ನಿಂದ ವಿಶ್ವವಿದ್ಯಾಲಯ ಸಿಬ್ಬಂದಿ ಮೃತಪಟ್ಟಿದ್ದಾರೆ. ಶೈಕ್ಷಣಿಕ ವಿಭಾಗದಲ್ಲಿ ಅಟೆಂಡರ್ ಆಗಿದ್ದ 52 ವರ್ಷದ P14497 ವ್ಯಕ್ತಿ ಸಾವಿಗೀಡಾಗಿದ್ದಾನೆ.
ಅಕ್ಕಮಹಾದೇವಿ ವಿಶ್ವವಿದ್ಯಾಲಯದಲ್ಲಿ ಬಾರಿ ಕಟ್ಟೆಚ್ಚರ ವಹಿಸಲಾಗಿದೆ. ಶೈಕ್ಷಣಿಕ ವಿಭಾಗದಲ್ಲಿ ಕೆಲಸ ಮಾಡ್ತಿದ್ದ 12 ಜನ ಸಿಬ್ಬಂದಿಗು ಹೋಮ್ ಕ್ವಾರಂಟೈನ್ ಮಾಡಲಾಗಿದೆ. ವಿಶ್ವವಿದ್ಯಾಲಯಕ್ಕೆ ಭೇಟಿಗೆ ಬರುವವರ ಸ್ಕ್ರಿನಿಂಗ್, ಸ್ಯಾನಿಟೈಸ್ ಗೆ ಕ್ರಮ ತೆಗೆದುಕೊಳ್ಳಲಾಗಿದೆ.
ಯುನಿವರ್ಸಿಟಿಯ 250ಕ್ಕೂ ಅಧಿಕ ಸಿಬ್ಬಂದಿಗಳಲ್ಲಿ ಆತಂಕ ಎದುರಾಗಿದ್ದು, ಎಲ್ಲರ ಗಂಟಲು ದ್ರವ ಮಾದರಿ ಪರೀಕ್ಷೆಗೆ ಕುಲಪತಿ ಮುಂದಾಗಿದ್ದಾರೆ. ಈಗಾಗಲೇ 180ಕ್ಕು ಅಧಿಕ ಸಿಬ್ಬಂದಿಯ ಗಂಟಲು ದ್ರವ ಮಾದರಿಯನ್ನ ಆರೋಗ್ಯ ಇಲಾಖೆ ಪಡೆದುಕೊಂಡಿದೆ.